ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ಇಳಿಮುಖವಾಗ್ತಿದೆ. ಸೆಪ್ಟೆಂಬರ್ 16 ರಂದು ದೇಶದಲ್ಲಿ 97,859 ಪ್ರಕರಣಗಳು ವರದಿಯಾಗಿದ್ದವು. ಇದು ದೊಡ್ಡ ಸಂಖ್ಯೆಯಾಗಿತ್ತು. ಇದರ ನಂತರ ಮುಂದಿನ 7 ದಿನಗಳಲ್ಲಿ ಈ ಸಂಖ್ಯೆ 83,000 ಕ್ಕೆ ಇಳಿದಿದೆ. ವೆಬ್ಸೈಟ್ ಪ್ರಕಾರ, ಸೆಪ್ಟೆಂಬರ್ 17 ರಂದು 96,793, ಸೆಪ್ಟೆಂಬರ್ 18 ರಂದು 92,789, ಸೆಪ್ಟೆಂಬರ್ 19 ರಂದು 92,755, ಸೆಪ್ಟೆಂಬರ್ 20 ರಂದು 87,382, ಸೆಪ್ಟೆಂಬರ್ 21 ರಂದು 74,493, ಸೆಪ್ಟೆಂಬರ್ 22 ರಂದು 80,391 ಪ್ರಕರಣಗಳು ವರದಿಯಾಗಿವೆ. ಸೆಪ್ಟೆಂಬರ್ 23 ರಂದು ಈ ಸಂಖ್ಯೆ 83,347 ಆಗಿದೆ.
ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಜನರ ಸಂಖ್ಯೆ ಅಮೆರಿಕಕ್ಕಿಂತ ಹೆಚ್ಚಾಗಿದೆ. ದೇಶದಲ್ಲಿ ಕೋವಿಡ್ -19 ರಿಂದ 45,87,614 ಜನರು ಗುಣಮುಖರಾಗಿದ್ದಾರೆ. ಯುಎಸ್ನಲ್ಲಿ 43,46,110 ಜನರು ಗುಣಮುಖರಾಗಿದ್ದಾರೆ.
ಒಂದೇ ದಿನದಲ್ಲಿ 12 ಲಕ್ಷ ಕೋವಿಡ್ ಪರೀಕ್ಷಿಸುವ ಸಾಮರ್ಥ್ಯ ದೇಶಕ್ಕೆ ಇದೆ. ಇಲ್ಲಿಯವರೆಗೆ ದೇಶದಲ್ಲಿ 6.5 ಕೋಟಿಗೂ ಹೆಚ್ಚು ಜನರು ಕೊರೊನಾ ಪರೀಕ್ಷೆಗೊಳಗಾಗಿದ್ದಾರೆಂದು ಕೇಂದ್ರ ಸಚಿವ ಹರ್ಷ್ ವರ್ಧನ್ ಹೇಳಿದ್ದಾರೆ.
ನೆಮ್ಮದಿ ಸುದ್ದಿಯೆಂದ್ರೆ ಸತತ 5 ನೇ ದಿನಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ 90,020 ಸಾವುಗಳು ಸಂಭವಿಸಿವೆ. ದೇಶದ ಅತ್ಯಂತ ಪೀಡಿತ ರಾಜ್ಯ ಮಹಾರಾಷ್ಟ್ರದಲ್ಲಿ ಸತತ 5 ನೇ ದಿನವೂ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಪ್ರಸ್ತುತ ಕೇವಲ 4 ರಾಜ್ಯಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಅವುಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿವೆ.