ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದ್ರೆ ಅಪಾಯ ಮುಂದುವರೆದಿದೆ. ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯವಾಗಿದೆ. ಹಿಂದೆ ಬಟ್ಟೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿತ್ತು. ಆದ್ರೀಗ ತಜ್ಞರು ಡಬಲ್ ಮಾಸ್ಕ್ ಗೆ ಸಲಹೆ ನೀಡ್ತಿದ್ದಾರೆ.
ಡಬಲ್ ಮಾಸ್ಕ್ ಅಂದ್ರೆ ಎರಡು ಮಾಸ್ಕ್ ಧರಿಸೋದು ನಿಜ. ಆದ್ರೆ ಯಾವ ಯಾವ ಮಾಸ್ಕ್ ಧರಿಸಬೇಕೆಂಬ ಪ್ರಶ್ನೆ ಉದ್ಬವವಾಗುತ್ತದೆ. ಏಕೆಂದ್ರೆ ದೇಶದಲ್ಲಿ ಸಾಕಷ್ಟು ಮಾಸ್ಕ್ ಇದೆ. ಸರ್ಜಿಕಲ್ ಮಾಸ್ಕ್, ಕಾಟನ್ ಮಾಸ್ಕ್, ಎನ್-95 ಮಾಸ್ಕ್ ಸೇರಿದಂತೆ ಸಾಕಷ್ಟು ಮಾಸ್ಕ್ ಇದೆ. ಅದ್ರಲ್ಲಿ ಯಾವ ಎರಡು ಮಾಸ್ಕ್ ಧರಿಸಬೇಕು ಎಂಬುದು ಜನರಿಗೆ ಗೊತ್ತಿರಬೇಕು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಡಬಲ್ ಮಾಸ್ಕ್ ತಯಾರಿಸುವುದು ಹೇಗೆ? ಅದ್ರ ಸರಿಯಾದ ಮಾರ್ಗ ಯಾವುದು ಎಂಬ ಬಗ್ಗೆ ಟ್ವೀಟ್ ಮಾಡಿದೆ. ಡಬಲ್ ಮಾಸ್ಕ್ ಗಾಗಿ ಮೊದಲು ಸರ್ಜಿಕಲ್ ಮಾಸ್ಕ್ ಧರಿಸಬೇಕು. ಅದ್ರ ಮೇಲೆ ಮತ್ತೊಂದು ಬಿಗಿಯಾದ ಬಟ್ಟೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ.
ಸರ್ಜಿಕಲ್ ಮಾಸ್ಕ್ ಇಲ್ಲ ಎನ್ನುವವರು ಎರಡು ಕಾಟನ್ ಮಾಸ್ಕ್ ಗಳನ್ನು ಒಟ್ಟಿಗೆ ಧರಿಸಬಹುದು. ಕೆಲವರು ಸರ್ಜಿಕಲ್ ಮಾಸ್ಕನ್ನು ತೊಳೆಯುತ್ತಾರೆ. ಇದು ಸರಿಯಲ್ಲ. ಎಂದೂ ಸರ್ಜಿಕಲ್ ಮಾಸ್ಕ್ ತೊಳೆಯಬಾರದು ಎಂದು ಸಚಿವಾಲಯ ಹೇಳಿದೆ. ಒಂದು ವೇಳೆ ಡಬಲ್ ಮಾಸ್ಕ್ ಗಾಗಿ ಸರ್ಜಿಕಲ್ ಮಾಸ್ಕ್ ಧರಿಸಿದ್ದರೆ ಅದನ್ನು ಐದು ಬಾರಿ ಬಳಸಬಹುದು. ಆದ್ರೆ ಒಮ್ಮೆ ಬಳಸಿದ ನಂತ್ರ 7 ದಿನಗಳ ಕಾಲ ಬಿಸಿಲಿನಲ್ಲಿಡಬೇಕೆಂದು ಸಚಿವಾಲಯ ಹೇಳಿದೆ.