ದೇಶದಲ್ಲಿ ಕೊರೊನಾ ಲಸಿಕೆ ಪಡೆಯುವವರ ನೋಂದಣಿ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದ್ದು ಕೋವಿಡ್ ಲಸಿಕೆಗೆ ನೋಂದಣಿ ಮಾಡ ಬಯಸುವವರು ಯಾವ ದಾಖಲೆಗಳನ್ನ ತೋರಿಸಲು ಅವಕಾಶ ನೀಡಬೇಕು ಅನ್ನೋದನ್ನ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಪಟ್ಟಿ ಮಾಡಿದೆ.
ಕೊರೊನಾ ಲಸಿಕೆಗೆ ನೋಂದಣಿ ಮಾಡ ಬಯಸುವ ನೀವು ನಿಮ್ಮ ಗುರುತಿಗಾಗಿ ಕಾರ್ಮಿಕ ಸಚಿವಾಲಯ, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಜಾಬ್ ಕಾರ್ಡ್, ವಾಹನ ಪರವಾನಿಗಿ ಕಾರ್ಡ್, ಸಂಸದ/ ಶಾಸಕರಿಗೆ ನೀಡಲಾಗುವ ಅಧಿಕೃತ ಗುರುತಿನ ಚೀಟಿ, ಪಾನ್ ಕಾರ್ಡ್, ಪಿಂಚಣಿ ದಾಖಲೆ, ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ಗಳನ್ನ ನೋಂದಣಿ ಸಮಯದಲ್ಲಿ ಬಳಕೆ ಮಾಡಬಹುದಾಗಿದೆ.
ಕೊರೊನಾ ಲಸಿಕೆಗೆ ಆನ್ಲೈನ್ನಲ್ಲಿ ನೋಂದಣಿ ಮಾಡಿದ ಬಳಿಕ ಫಲಾನುಭವಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ದಿನಾಂಕ, ಸ್ಥಳ ಹಾಗೂ ಲಸಿಕೆ ನೀಡಲಾಗುವ ಸಮಯವನ್ನ ಮೆಸೇಜ್ ಮೂಲಕ ಮಾಹಿತಿ ನೀಡಲಾಗುತ್ತದೆ.
ಆನ್ಲೈನ್ನಲ್ಲಿ ಎಲ್ಲಾ ದಾಖಲೆಗಳನ್ನ ಸಲ್ಲಿಸಿದ್ದ ಬಳಿಕ ಕ್ಯೂಆರ್ ಕೋಡ್ ಆಧಾರಿತ ಪ್ರಮಾಣ ಪತ್ರವನ್ನ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಆನ್ಲೈನ್ನಲ್ಲಿ ಕೊರೊನಾ ಲಸಿಕೆಗೆ ನೋಂದಾವಣಿ ಮಾಡಬಯಸುವವರು ಫೋಟೋ ಐಡಿ ನೀಡೋದು ಕಡ್ಡಾಯವಾಗಿರಲಿದೆ.