ನವದೆಹಲಿ: ಕೊರೋನಾ ಸೋಂಕಿನಿಂದ ಮಧುಮೇಹ ಕಾಣಿಸಿಕೊಳ್ಳಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೆ, ಈಗಾಗಲೇ ಮಧುಮೇಹ ಇರುವವರಿಗೆ ಕೊರೋನಾ ವೈರಾಣುಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನಲಾಗಿದೆ.
ಇಂಟರ್ ನ್ಯಾಷನಲ್ ಗ್ರೂಪ್ ಆಫ್ 17 ತಂಡದಲ್ಲಿರುವ ಅಂತರರಾಷ್ಟ್ರೀಯ ತಜ್ಞರು ಅಧ್ಯಯನ ನಡೆಸಿ ಕೊರೋನಾ ಪರಿಣಾಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೊರೋನಾ ವೈರಸ್ ದಾಳಿಯಿಂದ ಹೊಸ ಬಗೆಯ ಮಧುಮೇಹ ಕಾಣಿಸಿಕೊಳ್ಳಬಹುದು. ವೈರಸ್ ನಿಂದಲೇ ಮಧುಮೇಹ ಬರಬಹುದು. ಅಲ್ಲದೆ, ಈಗಾಗಲೇ ಮಧುಮೇಹ ಇರುವವರಿಗೆ ಕೊರೋನ ವೈರಸ್ ನಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಿದ್ದಾರೆ.
ಅಧ್ಯಯನ ತಂಡದ ಸದಸ್ಯರಲ್ಲಿ ಒಬ್ಬರಾದ ಸ್ಟೆಫಾನಿ ಎ. ಅಮಿಲ್ ನೀಡಿರುವ ಮಾಹಿತಿಯಂತೆ ಕೊರೋನಾ ಸೋಂಕಿಗೆ ಮಧುಮೇಹಿಗಳು ಬೇಗನೆ ತುತ್ತಾಗುವ ಅಪಾಯವಿದೆ. ಕೊರೋನಾ ತಗುಲಿದ ಮಧುಮೇಹಿಗಳಲ್ಲಿ ಶೇಕಡ 20 ರಿಂದ 30 ರಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.