ನವದೆಹಲಿ: ದೇಶದಲ್ಲಿ ಶೇಕಡ 60 ರಷ್ಟು ಜನ ಕೊರೊನಾ ಅಪಾಯದಲ್ಲಿದ್ದಾರೆ ಎಂದು ಹೇಳಲಾಗಿದೆ. ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಈ ಕುರಿತಾದ ವರದಿ ಬಿಡುಗಡೆ ಮಾಡಿದೆ.
ಭಾರತದ 9 ರಾಜ್ಯಗಳಲ್ಲಿ ಕೊರೋನಾ ತೀವ್ರತೆ ಹೆಚ್ಚಾಗಲಿದ್ದು, ಜನ ಕೊರೊನಾ ಅಪಾಯಕ್ಕೆ ಸಿಲುಕಲಿದ್ದಾರೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಗುಜರಾತ್, ಒಡಿಶಾ, ತೆಲಂಗಾಣ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಅಪಾಯವಿದೆ ಎಂದು ವರದಿ ನೀಡಲಾಗಿದೆ.