alex Certify ʼಕೊರೊನಾʼ ರೋಗ ಲಕ್ಷಣದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ರೋಗ ಲಕ್ಷಣದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ವಿಶ್ವದಲ್ಲಿ ಲಕ್ಷಾಂತರ ಜನರನ್ನು ಬಾಧಿಸಿದೆ. ಆದರೆ, ಅದರ ಲಕ್ಷಣಗಳು, ಬರದಂತೆ ತಡೆಯುವ ಔಷಧ ಇನ್ನೂ ಸಿಕ್ಕಿಲ್ಲ. ಸಾರ್ಸ್ ಕೋವ್- 2 ಗೆ ಒಳಗಾದವರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಎಷ್ಟೊ‌ ಬಾರಿ ಜ್ವರ ಥಂಡಿ ಮುಂತಾದ ಸಾಮಾನ್ಯ ಉಸಿರಾಟದ ತೊಂದರೆಗಳ ಲಕ್ಷಣಗಳೇ ಕೋವಿಡ್ ಗೂ ಇರುವುದರಿಂದ ಹಲವರಿಗೆ ರೋಗ ಬಂದು ಹೋದರೂ ಗೊತ್ತಾಗದೇ ಇರಬಹುದು. ಹಾಗೇ ಗುಣವಾಗಿರಲೂಬಹುದು.

ಸದ್ಯ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಡಿಸೀಸ್ (ಸಿಡಿಸಿ) ತಜ್ಞರ ತಂಡವೊಂದು‌ ಕೋವಿಡ್ ಬಂದಿದ್ದರೆ ಅಥವಾ ಬಂದು ಹೋಗಿದ್ದರೆ ಯಾವ ಲಕ್ಷಣ ಇರಬಹುದು ಎಂಬ 5 ಸಾಮಾನ್ಯ ಲಕ್ಷಣಗಳ ಪಟ್ಟಿ ಮಾಡಿದೆ. ಕ್ಲಿ ನಿಕಲ್ ಮತ್ತು‌ ಟ್ರಾನ್ಸ್ ಲೇಶನಲ್ ನ್ಯೂರಾಲಜಿ ವಿಷಯದಲ್ಲಿ ಪ್ರಕಟವಾದ ಜರ್ನಲ್ ನಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ.

412 ರೋಗಿಗಳನ್ನು ಪರೀಕ್ಷಿಸಿದಾಗ ಶೀತ ಅಥವಾ ಥಂಡಿ ಹಾಗೂ ಜ್ವರ ಸಾಮಾನ್ಯ ಲಕ್ಷಣ. ಇನ್ನು ಶೇ.82 ರಷ್ಟು ಜನರಲ್ಲಿ ಗುಣವಾದ ನಂತರವೂ ನರ ಮಂಡಲದ ಸಮಸ್ಯೆ ಕಾಣಿಸಿದೆ ಎನ್ನುತ್ತದೆ ಅಧ್ಯಯನ.

ಸಣ್ಣ ತಲೆ ನೋವು ಇನ್ನೊಂದು ಲಕ್ಷಣ. ಶೇ.44.8 ರಷ್ಟು ಜನರಲ್ಲಿ ಮಾಂಸ ಖಂಡಗಳ ನೋವು ಕಾಣಿಸಿಕೊಂಡಿದೆ. ಇನ್ನು ಶೇ. 31.8 ಜನರಲ್ಲಿ ಮಿದುಳಿಗೆ ಮಂಕು‌ ಕವಿದ ಅಥವಾ ಯೋಚನೆಯಲ್ಲಿ ಗೊಂದಲ ಉಂಟಾಗುವ ಲಕ್ಷಣ ಕಾಣಿಸಿಕೊಂಡಿದೆ. ರುಚಿ ಇಲ್ಲದಿರುವುದು. ಕಣ್ಣಿನ ನೋವೂ‌ ಕೂಡ ಕೋವಿಡ್ ಲಕ್ಷಣಗಳಾಗಿವೆ ಎಂದು ಅಧ್ಯಯನ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...