ಕೋವಿಡ್-19 ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಬಹುತೇಕ ಪ್ರಕರಣದಲ್ಲಿ ಉಸಿರಾಟದ ಸಮಸ್ಯೆಯೇ ಅತಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ.
ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು, ಲಘು ಲಕ್ಷಣಗಳು ಗಂಭೀರ ಲಕ್ಷಣಗಳಾಗುವ ಅಪಾಯವೂ ಇರುತ್ತದೆ.
ಡಾ.ಅರವಿಂದ್ ಮೋಹನ್ ಅವರ ಪ್ರಕಾರ, ಶ್ವಾಸಕೋಶವನ್ನು ದುರ್ಬಲಗೊಳಿಸಿ, ಉಸಿರಾಟದ ಮೇಲೆ ದುಷ್ಪರಿಣಾಮ ಬೀರುವ ವೈರಾಣು, ಕ್ರಮೇಣ ನ್ಯುಮೋನಿಯಾಕ್ಕೆಡೆ ತಿರುಗಿ ಮಾರಣಾಂತಿಕವೂ ಆಗಬಲ್ಲದು.
ವಿಪರೀತ ಕಫ ತುಂಬಿಕೊಂಡು ಕೆಮ್ಮು ಹೆಚ್ಚಾಗುತ್ತದೆ. ತಿಂಗಳ ಕಾಲ ತೊಂದರೆ ಮುಂದುವರಿಯುತ್ತದೆ. ಅಗತ್ಯಕ್ಕಿಂತ ಕಡಿಮೆ ಆಮ್ಲಜನಕ ಪೂರೈಕೆ ಆಗಲಾರಂಭಿಸುತ್ತದೆ. ಉಸಿರಾಡಲು ಕಷ್ಟವಾಗುತ್ತದೆ. ನಂತರದಲ್ಲಿ ಹೃದಯಬೇನೆ ಸಹ ಶುರುವಾಗುತ್ತದೆ. ಬಳಿಕ ಬಹು ಅಂಗಾಂಗದ ಮೇಲೆ ಪರಿಣಾಮ ಬೀರಿ, ಸಾವಿನೆಡೆಗೆ ಒಯ್ಯುತ್ತದೆ. ಹೀಗಾಗಿ ರೋಗಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಸೂಕ್ತ.