ಕೊರೋನಾ ಹೊಡೆತಕ್ಕೆ ವಿಶ್ವದ ಮೂಲೆ ಮೂಲೆಯಲ್ಲಿರುವ ಧಾರ್ಮಿಕ ಆಚರಣೆಗಳು ನಲುಗಿದವು. ಆದರೆ ಗಣೇಶ ಚತುರ್ಥಿ ಮಾತ್ರ ಕೊರೊನಾ ನಡುವೆಯೂ ವಿಭಿನ್ನವಾಗಿ ಆಚರಿಸಲಾಗಿದೆ. ಈ ಬಾರಿ ಗಣೇಶ ಹಬ್ಬದ ಕಲ್ಪನೆಯೇ ಹಲವೆಡೆ ಕೊರೊನಾ ಎನ್ನುವುದಾಗಿದೆ.
ಹೌದು, ಹೈದರಾಬಾದ್‌ನಲ್ಲಿ ಒಂದೆಡೆ ಈ ಬಾರಿ ಗಣೇಶನ ಮೂರ್ತಿಯನ್ನು ಕೊರೊನಾ ವಾರಿಯರ್ಸ್‌ಗೆ ಸಮರ್ಪಿಸಿದ್ದಾರೆ. ಗಣೇಶ ಮೂರ್ತಿಯಲ್ಲಿ ಪೊಲೀಸ್, ವೈದ್ಯರು, ಪೌರ ಕಾರ್ಮಿಕರು ಸೇರಿದಂತೆ ಎಲ್ಲ ಕೊರೊನಾ ವಾರಿಯರ್ಸ್ ಬರುವ ರೀತಿ ಮೂರ್ತಿಯನ್ನು ಸಿದ್ಧಪಡಿಸಲಾಗಿದೆ.
ಈ ಮೂರ್ತಿಯೂ ಪರಿಸರ ಸ್ನೇಹಿ ಗಣಪತಿಯಾಗಿದ್ದು, ಸಾರ್ವಜನಿಕರಿಗಾಗಿ ತಮ್ಮ ಜೀವವನ್ನು ಪಣಕ್ಕೆ ಇಡುತ್ತಿರುವ ವಾರಿಯರ್ಸ್‌ಗೆ ಧನ್ಯವಾದ ಅರ್ಪಿಸಲು ಈ ರೀತಿ ಮಾಡಲಾಯಿತು ಎಂದು ಸಂಘಟನೆಯವರು ಹೇಳಿದ್ದಾರೆ. ಕೊರೊನಾದ ಹೆಸರಲ್ಲಿ ಗಣಪತಿ ವಿವಿಧ ರೀತಿಯಲ್ಲಿ ಕಾಣಿಸಿಕೊಂಡು, ಗಣೇಶ ಚತುರ್ಥಿ ವಿಭಿನ್ನವಾಗಿ ನಡೆದಿದೆ ಎನ್ನುವುದಂತು ಸತ್ಯ.