ಕೇಂದ್ರದ ಮೋದಿ ಸರ್ಕಾರ ಸಂಸದರ ವೇತನಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲೋಕಸಭೆಯಲ್ಲಿ ಸರ್ಕಾರ ಸೋಮವಾರ ಮಸೂದೆಯನ್ನು ಪರಿಚಯಿಸಿದೆ. ಸಂಸದರ ವೇತನವನ್ನು ಒಂದು ವರ್ಷದ ಮಟ್ಟಿಗೆ ಶೇಕಡಾ 30ರಷ್ಟು ಕಡಿತಗೊಳಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸಂಸತ್ ಸದಸ್ಯರ ಸಂಬಳ, ಭತ್ಯೆ ಮತ್ತು ಪಿಂಚಣಿ ತಿದ್ದುಪಡಿ ಮಸೂದೆ 2020 ಅನ್ನು ಲೋಕಸಭೆಯಲ್ಲಿ ಪರಿಚಯಿಸಿದರು. ಇದು ಸಂಸತ್ತಿನ ಸದಸ್ಯರ ಸಂಬಳ, ಭತ್ಯೆ ಮತ್ತು ಪಿಂಚಣಿ ಸುಗ್ರೀವಾಜ್ಞೆ 2020 ಅನ್ನು ಬದಲಾಯಿಸುತ್ತದೆ.
ಸಂಸತ್ ಸದಸ್ಯರ ಸಂಬಳ, ಭತ್ಯೆ ಮತ್ತು ಪಿಂಚಣಿ ಕಾಯ್ದೆ 1954 ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸುತ್ತಿದ್ದೇನೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು. ಈ ಸುಗ್ರೀವಾಜ್ಞೆಯನ್ನು ಏಪ್ರಿಲ್ 6 ರಂದು ಕ್ಯಾಬಿನೆಟ್ ಅಂಗೀಕರಿಸಿತ್ತು. ಸಂಸದರ ಈ ಹಣ ಸಿಎಫ್ಐಗೆ ಹೋಗಲಿದೆ. ಆದಾಯ ತೆರಿಗೆ, ಕೇಂದ್ರ ಅಬಕಾರಿ, ಕಸ್ಟಮ್ಸ್ ಸುಂಕ ಸೇರಿ ಸರ್ಕಾರದ ಎಲ್ಲಾ ಆದಾಯ ಮತ್ತು ಇತರ ರಶೀದಿಗಳು ಈ ನಿಧಿಗೆ ಹೋಗುತ್ತವೆ.