ವಿಶ್ವಾದ್ಯಂತ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಕೊರೊನಾ ವೈರಸ್ ತಾಂಡವವಾಡುತ್ತಲೇ ಇದೆ.
ಭಾರತ, ಅಮೆರಿಕ, ರಷ್ಯಾ ಹಾಗೂ ಬ್ರಿಟನ್ ಸೇರಿದಂತೆ ಹೆಚ್ಚಿನ ರಾಷ್ಟ್ರಗಳಲ್ಲಿ ಕೊರೊನಾವನ್ನ ನಿಯಂತ್ರಣ ಮಾಡಲೇಬೇಕು ಅಂತಾ ಜನತೆಗೆ ಲಸಿಕೆ ನೀಡಲಾಗ್ತಿದೆ. ಆದರೆ ಇದರ ನಡುವೆಯೇ ಆಘತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹೊಸ ಅಧ್ಯಯನವೊಂದರಲ್ಲಿ ವಿಶ್ವದಲ್ಲಿ 1 ಪ್ರತಿಶತ ಜನರಿಗೆ ಕೊರೊನಾ ಎರಡನೇ ಬಾರಿಗೆ ದಾಳಿ ಮಾಡಿದೆ. ಅದೇ ಭಾರತದಲ್ಲಿ ಮರು ಸೋಂಕಿನ ಅಪಾಯ 4.5 ಪ್ರತಿಶತದಷ್ಟಿದೆ.
ಹಿಂದೂಸ್ತಾನ್ ಟೈಮ್ಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ವಿಶ್ವದಲ್ಲಿ ಇಲ್ಲಿವರೆಗೆ ಕೊರೊನಾ ವೈರಸ್ಗೆ ಎರಡನೇ ಬಾರಿಗೆ ತುತ್ತಾದವರ ಪ್ರಮಾಣ ಕೇವಲ 1 ಪ್ರತಿಶತದಷ್ಟಿದೆ. ಆದರೆ ಇದೇ ಭಾರತದಲ್ಲಿ ಕೊರೊನಾ ವೈರಸ್ಗೆ ಎರಡನೇ ಬಾರಿ ತುತ್ತಾದವರ ಪ್ರಮಾಣ 4.5 ಪ್ರತಿಶತಕ್ಕೂ ಹೆಚ್ಚಿದೆ ಎಂದು ತಿಳಿದು ಬಂದಿದೆ.
ಕೊರೊನಾ ಸಂದರ್ಭದಲ್ಲೂ ಹೆಚ್ಚಿನ ಗಳಿಕೆಗೆ ಕಾರಣವಾಯ್ತು ಈ ಮಾರ್ಗ
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ನ ವಿಜ್ಞಾನಿಗಳು ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಮತ್ತೊಮ್ಮೆ ಕೊರೊನಾದ ಅಲೆ ಜೋರಾಗಿದ್ದು ಇದೊಂದು ಗಂಭೀರ ಪ್ರಕರಣವಾಗಿದೆ. ಒಮ್ಮೆ ಕೊರೊನಾದಿಂದ ಬಚಾವಾದ ಬಳಿಕ ದೇಹದಲ್ಲಿ ಆಂಟಿಬಾಡಿ ಉತ್ಪತ್ತಿ ಆಗುತ್ತೆ. ಇದರಿಂದ ಕೊರೊನಾ ಎರಡನೇ ಬಾರಿ ಹರಡುವ ಅಪಾಯ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಆದರೆ ಈ ಆಂಟಿಬಾಡಿ ಶಾಶ್ವತವಾಗಿ ದೇಹದಲ್ಲಿ ಇರೋದಿಲ್ಲ. ಹೀಗಾಗಿ ಎರಡನೇ ಬಾರಿಗೆ ಸೋಂಕಿಗೆ ತುತ್ತಾದವರಲ್ಲಿ ಗಂಭೀರ ಲಕ್ಷಣಗಳು ಕಂಡುಬರ್ತಿವೆ.