ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಎರಡು ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗ್ತಿದೆ. ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. ಆದ್ರೆ ಮಹಾರಾಷ್ಟ್ರದ ಜಿಲ್ನಾ ಜಿಲ್ಲೆಯಲ್ಲಿ 72 ವರ್ಷದ ವ್ಯಕ್ತಿಗೆ ಬೇರೆ ಬೇರೆ ಲಸಿಕೆ ಹಾಕಲಾಗಿದೆ. ಮೊದಲ ಡೋಸ್ ಒಂದು ಲಸಿಕೆಯಾದ್ರೆ, ಎರಡನೇ ಡೋಸ್ ಗೆ ಬೇರೆ ಲಸಿಕೆ ಹಾಕಲಾಗಿದೆ. ಮೊದಲು ಕೋವಿಶೀಲ್ಡ್ ಹಾಕಲಾಗಿತ್ತು. ಎರಡನೇ ಡೋಸ್ ಹಾಕುವ ವೇಳೆ ಕೋವ್ಯಾಕ್ಸಿನ್ ಹಾಕಲಾಗಿದೆ. ವ್ಯಕ್ತಿ ಅನಕ್ಷರಸ್ಥನಾಗಿದ್ದು,ಆತನ ಮಗ ಇದ್ರ ಬಗ್ಗೆ ಹೇಳಿಕೆ ನೀಡಿದ್ದಾನೆ.
ಎರಡನೇ ಲಸಿಕೆ ಹಾಕಿದ ನಂತ್ರ ಜ್ವರ, ಸುಸ್ತು ಕಾಣಿಸಿಕೊಂಡಿತ್ತಂತೆ. ದೇಹದ ಕೆಲ ಭಾಗಗಳಲ್ಲಿ ದದ್ದು ಕಾಣಿಸಿಕೊಂಡ ನಂತ್ರ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರಂತೆ. ಆರೋಗ್ಯ ಕೇಂದ್ರದಲ್ಲಿ ಔಷಧಿ ನೀಡಲಾಗಿದ್ದು, ಈಗ ಆರೋಗ್ಯ ಸುಧಾರಿಸಿದೆ ಎಂದಿದ್ದಾರೆ. ಕೊರೊನಾದ ಬೇರೆ ಬೇರೆ ಲಸಿಕೆ ತೆಗೆದುಕೊಂಡಲ್ಲಿ ಸೌಮ್ಯ ಜ್ವರ ಕಾಣಿಸಿಕೊಳ್ಳುತ್ತದೆ. ಬ್ಲೂಮ್‌ಬರ್ಗ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯದ ವರದಿಯೊಂದರ ಪ್ರಕಾರ, ತಲೆ ನೋವು, ಸುಸ್ತು ಕಾಡಬಹುದು. ಇದು ಸೌಮ್ಯವಾಗಿರುತ್ತದೆ ಎನ್ನಲಾಗಿದೆ.
ಕೊರೊನಾ ಲಸಿಕೆ ಖರೀದಿಗೆ 100 ಕೋಟಿ ರೂಪಾಯಿ ನೀಡಿದ ರಾಜ್ಯ ಕಾಂಗ್ರೆಸ್
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಕೂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಎರಡು ವಿಭಿನ್ನ ಲಸಿಕೆಗಳನ್ನು ಅನ್ವಯಿಸುವುದರಿಂದ ಅಲ್ಪಾವಧಿಯಲ್ಲಿ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನವೊಂದರಲ್ಲಿ ಕಂಡುಹಿಡಿದಿದ್ದಾರೆ. ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್‌ನ ವರದಿಯ ಪ್ರಕಾರ, ಜನರಿಗೆ ಮೊದಲು ಅಸ್ಟ್ರಾಜೆನೆಕಾ ಲಸಿಕೆ ನೀಡಲಾಯಿತು. ಎರಡನೆಯದಾಗಿ ಫಿಜರ್ ಲಸಿಕೆ ನೀಡಲಾಯಿತು. ಎರಡನೇ ಡೋಸ್ ತೆಗೆದುಕೊಂಡ ನಂತರ ಜನರಲ್ಲಿ ಅಡ್ಡಪರಿಣಾಮಗಳು ಕಂಡು ಬಂದಿದ್ದು, ಅವು ಸೌಮ್ಯವಾಗಿದ್ದವು.