ನವದೆಹಲಿ: ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೊನಾ ಲಸಿಕೆ ಕೋವ್ಯಾಕ್ಸಿನ್ 2021ರ ಜೂನ್ ವೇಳೆಗೆ ಬಿಡುಗಡೆಯಾಗಲಿದೆ.
ಈಗಾಗಲೇ ಪ್ರಯೋಗದ ಹಂತದಲ್ಲಿ ಲಸಿಕೆ ಯಶಸ್ವಿಯಾಗಿದ್ದು ಮೂರನೇ ಹಂತದ ಪ್ರಯೋಗ ಸಂಪೂರ್ಣ ಯಶಸ್ವಿಯಾಗಿ ಎಲ್ಲ ಒಪ್ಪಿಗೆ ದೊರೆತ ನಂತರ ಲಸಿಕೆ ಬಿಡುಗಡೆ ಮಾಡಲಾಗುವುದು. 2021 ರ ಎರಡನೇ ತ್ರೈಮಾಸಿಕದಲ್ಲಿ ಲಸಿಕೆ ಬಿಡುಗಡೆ ಮಾಡುವುದಾಗಿ ಭಾರತ ಬಯೋಟೆಕ್ ಕಾರ್ಯಕಾರಿ ನಿರ್ದೇಶಕ ಸಾಯಿ ಪ್ರಸಾದ್ ಹೇಳಿದ್ದಾರೆ.
ಹೈದರಾಬಾದ್ ಮೂಲದ ಕಂಪನಿ ಭಾರತ್ ಬಯೋಟೆಕ್ ಕಂಪನಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ರಾಷ್ಟ್ರೀಯ ವೈರಾಲಜಿ ಸಂಸ್ಥೆ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೂರನೇ ಹಂತದ ಪ್ರಯೋಗಕ್ಕೆ ಡಿಸಿಜಿಐ ಅನುಮತಿ ಪಡೆಯಲಾಗಿದೆ.