ನವದೆಹಲಿ: ಕೊರೋನಾ ಲಸಿಕೆಯ ಖರೀದಿಗೆ ಪ್ರತ್ಯೇಕ ಯೋಜನೆ ಬೇಡವೆಂದು ರಾಜ್ಯಸರ್ಕಾರಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ ನೀಡಲಾಗಿದೆ.
ಲಸಿಕೆ ಸಿಕ್ಕ ನಂತರ ಆದ್ಯತಾ ವಲಯಕ್ಕೆ ಉಚಿತವಾಗಿ ಕೇಂದ್ರ ಸರ್ಕಾರದಿಂದ ಲಸಿಕೆ ನೀಡಲು ಯೋಜನೆ ಸಿದ್ಧಪಡಿಸಲಾಗಿದೆ. ರಾಜ್ಯ, ಜಿಲ್ಲಾ ನೆಟ್ವರ್ಕ್ ಮೂಲಕ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.
ಆರಂಭಿಕ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು. ನವೆಂಬರ್ ನಲ್ಲಿ ಆದ್ಯತಾ ವಲಯದ ಪಟ್ಟಿ ತಯಾರಿಸಲಾಗುವುದು. ಡಿಜಿಟಲ್ ಪ್ಲಾಟ್ ಫಾರಂ ಬಳಸಿ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.