ಕೊರೋನಾ ಸೋಂಕು ಮಾನವರ ಚರ್ಮದ ಮೇಲೆ 9 ಗಂಟೆಗಳ ಕಾಲ ಜೀವಿಸಬಲ್ಲದು ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ.
ಜಪಾನ್ ಮೂಲದ ವಿಜ್ಞಾನಿಗಳು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯ ದೇಹದ ಸಂಶೋಧನೆ ನಡೆಸಿದ ಸಂದರ್ಭದಲ್ಲಿ ವಿಷಯ ಗೊತ್ತಾಗಿದೆ. ಮನುಷ್ಯನ ದೇಹದ ಮೇಲೆ ಫ್ಲು ವೈರಸ್ 1.8 ಗಂಟೆ ಜೀವಿಸಬಲ್ಲದು. ಕೊರೊನಾ ವೈರಸ್ 9 ಗಂಟೆಯವರೆಗೂ ಇರುತ್ತದೆ. ಈ ಕಾರಣದಿಂದ ಕೊರೊನಾ ಸೋಂಕು ಹರಡುವ ಪ್ರಮಾಣ ಹೆಚ್ಚಾಗಿರುತ್ತದೆ.
ಆಗಾಗ ಕೈ ತೊಳೆಯುವುದರಿಂದ ಕೊರೊನಾ ಸೋಂಕಿಗೆ ಕಡಿವಾಣ ಹಾಕಬಹುದು ಎಂದು ಹೇಳಲಾಗಿದೆ. 15 ಸೆಕೆಂಡ್ ಕಾಲ ಎಥನಾಲ್ ಬಳಕೆ ಮಾಡಿದಲ್ಲಿ ಕೊರೋನಾ ವೈರಸ್ ಮತ್ತು ಫ್ಲು ಸಾವನ್ನಪ್ಪುತ್ತವೆ ಎಂದು ಹೇಳಲಾಗಿದೆ.