alex Certify ಸಿಟಿ ಸ್ಕ್ಯಾನ್ ಮಾಡುವ ಮೊದಲು ಕೊರೊನಾ ರೋಗಿಗಳಿಗೆ ತಜ್ಞರ ಕಿವಿ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಟಿ ಸ್ಕ್ಯಾನ್ ಮಾಡುವ ಮೊದಲು ಕೊರೊನಾ ರೋಗಿಗಳಿಗೆ ತಜ್ಞರ ಕಿವಿ ಮಾತು

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಇಂದು ಆರೋಗ್ಯ ಸಚಿವಾಲಯ ಸ್ವಲ್ಪ ನೆಮ್ಮದಿ ಸುದ್ದಿ ನೀಡಿದೆ. ದೇಶದಲ್ಲಿ ಶನಿವಾರ –ಭಾನುವಾರಕ್ಕೆ ಹೋಲಿಸಿದ್ರೆ 24 ಗಂಟೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. 3.68 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದು ಒಳ್ಳೆ ಬೆಳವಣಿಗೆ. ಆದ್ರೆ ಇದು ಆರಂಭಿಕವಾಗಿದ್ದು, ಎಲ್ಲ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.

ದೇಶದಲ್ಲಿ ಶೇಕಡಾ 87.77 ಜನರನ್ನು ಗುಣಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್‌ವಾಲ್ ಹೇಳಿದ್ದಾರೆ. ಶೇಕಡಾ 1.1 ಜನರು ಸಾವನ್ನಪ್ಪಿದ್ದಾರೆಂದು ಅವರು ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ, ದೈನಂದಿನ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಛತ್ತೀಸ್ಗಢ, ದೆಹಲಿ, ಮಹಾರಾಷ್ಟ್ರ, ಜಾರ್ಖಂಡ್, ಪಂಜಾಬ್, ತೆಲಂಗಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲೂ ಪರಿಸ್ಥಿತಿ ಸುಧಾರಿಸುತ್ತಿದೆ ಎಂದವರು ಹೇಳಿದ್ದಾರೆ.

ಇದ್ರ ಜೊತೆ ಸಿಟಿ ಸ್ಕ್ಯಾನ್ ಬಗ್ಗೆ ತಜ್ಞರು ಮಹತ್ವದ ಸಲಹೆ ನೀಡಿದ್ದಾರೆ. ಈ ಸಮಯದಲ್ಲಿ ಬಹಳಷ್ಟು ಜನರು ಸಿಟಿ ಸ್ಕ್ಯಾನ್‌ ಮಾಡಿಸುತ್ತಿದ್ದಾರೆ. ಆರಂಭದಲ್ಲಿ ಇದನ್ನು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದಾರೆ. ಲಕ್ಷಣರಹಿತ ಜನರು ಸಹ ಸಿಟಿ ಸ್ಕ್ಯಾನ್ ಮಾಡಿಸುತ್ತಿದ್ದಾರೆ. ಇದ್ರಿಂದ ಆತಂಕ ಹೆಚ್ಚಾಗುತ್ತದೆ. ಜೊತೆಗೆ  ಕ್ಯಾನ್ಸರ್ ಅಪಾಯವೂ ಇದೆ ಎಂದವರು ಹೇಳಿದ್ದಾರೆ. ಅಲ್ಲದೆ ಆರಂಭಿಕ ಹಂತದಲ್ಲಿ ಸ್ಟಿರಾಯ್ಡ್ ಗಳನ್ನು ಸೇವಿಸುವುದರಿಂದ ವೈರಸ್ ಹೆಚ್ಚಾಗುತ್ತದೆ. ಸೌಮ್ಯ ಪ್ರಕರಣಗಳು ಸಹ ಸ್ಟಿರಾಯ್ಡ್ ತೆಗೆದುಕೊಳ್ಳುವುದ್ರಿಂದ ಹೆಚ್ಚಾಗುತ್ತದೆ ಎಂದವರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...