ದೇಶದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿರುವ ಕೊರೊನಾ ಹೆಚ್ಚುತ್ತಿರುವ ನಡುವೆಯೂ ಇಡೀ ದೇಶವನ್ನು ಅನ್ ಲಾಕ್ ಮಾಡುವ ಪ್ರಕ್ರಿಯೆಯಲ್ಲಿ ಕೇಂದ್ರ ಸರಕಾರವಿದೆ. ಆದರೆ ಈ ಮಧ್ಯೆ ವಾರಣಾಸಿಯಲ್ಲಿ ವಿಶೇಷ ಮಾಲ್ ಒಂದು ಆರಂಭಿಸಲಾಗಿದೆ.
ಹೌದು, ಕೊರೊನಾ ಅನ್ ಲಾಕ್ ನಿಂದ ಜನರಿಗೆ ಕೊರೊನಾ ವಿರುದ್ಧ ಹೋರಾಡಲು ಹಾಗೂ ಅದರಿಂದ ದೂರ ಉಳಿಯಲು ಹಲವು ಸಾಮಗ್ರಿಗಳ ಅವಶ್ಯಕತೆಯಿದೆ. ಇದನ್ನು ಮನಗಂಡ ವಾರಣಾಸಿಯ ಉದ್ಯಮಿಯೊಬ್ಬರು ಕೊರೊನಾ ಮಾಲ್ ಅನ್ನು ಆರಂಭಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಮಾಲ್‌ಗೆ ಕೊರೊನಾ ಎಂದು ಹೆಸರಿಡಲಾಗಿದೆ ಎಂದು ಮಾಲೀಕ ಅಶೋಕ್ ಸಿಂಗ್ ಹೇಳಿದ್ದಾರೆ. ಈ ಮಾಲ್ ನಲ್ಲಿ ಸ್ಯಾನಿಟೈಸರ್, ಮಾಸ್ಕ್‌ನಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನದ ಟನಲ್‌ವರೆಗೂ ಲಭ್ಯವಿದೆ ಎಂದು ಹೇಳಿದ್ದಾರೆ. ಇನ್ನು ಇದಕ್ಕೆ ಮೊದಲು ಚೋಟಾ ಮಾಲ್ ಎಂದು ಹೆಸರಿಡಲಾಗಿತ್ತು ಎಂದು ಹೇಳಲಾಗಿದೆ.