ನವದೆಹಲಿ: ಕೊರೋನಾ ಸೋಂಕು ತಡೆಯಲು ಮತ್ತೊಂದು ಔಷಧ ಬಳಕೆಗೆ ಅನುಮತಿ ನೀಡಲಾಗಿದೆ. ರೆಮ್ ಡಿಸಿವರ್ ನ ಜನರಿಕ್ ಮಾದರಿಯ ಕೋವಿಫರ್ ಬಳಕೆಗೆ ಸರ್ಕಾರ ಸಮ್ಮತಿ ನೀಡಿದೆ.
ಅಮೆರಿಕದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ರೆಮ್ ಡಿಸೀವರ್ ಹೆಚ್ಚಾಗಿ ಬಳಕೆಯಾಗುತ್ತಿದೆ. ರೆಮ್ ಡಿಸೀವರ್ ಜನರಿಕ್ ಔಷಧ ಕೋವಿಫರ್ ಇಂಜೆಕ್ಷನ್ ಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ.
ಹೆಟೆರೋ ಕಂಪನಿ ಉತ್ಪಾದಿಸುವ ಇಂಜೆಕ್ಷನ್ ಒಂದು ಡೋಸ್ ಗೆ 5 ರಿಂದ 6 ಸಾವಿರ ರೂಪಾಯಿ ದರ ಇದ್ದು, ತೀವ್ರ ಅಸ್ವಸ್ಥರಾದ ಕೊರೋನಾ ಸೋಂಕಿತರಿಗೆ ಇದನ್ನು ನೀಡಲಾಗುವುದು. ಭಾರತದಲ್ಲಿ ಈ ಔಷಧ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಕೊರೊನಾ ಚಿಕಿತ್ಸೆಗೆ ಗ್ಲೆನ್ ಮಾರ್ಕ್ ಕಂಪನಿಯ ಒಂದು ಮಾತ್ರೆಗೆ 103 ರೂಪಾಯಿ ಬೆಲೆ ಇರುವ ಫಾವಿಪಿರಾವಿರ್ ಮಾತ್ರೆಯನ್ನು ಭಾರತದಲ್ಲಿ ಮಾರಾಟ ಮಾಡಲು ಈಗಾಗಲೇ ಅನುಮತಿ ನೀಡಲಾಗಿದೆ.