ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಂಗಾಪುರದಲ್ಲಿ ಕಂಡು ಬಂದಿರುವ ಕೊರೊನಾ ವೈರಸ್ನ ಹೊಸ ರೂಪಾಂತರಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಿಂಗಾಪುರದ ಈ ಹೊಸ ರೂಪಾಂತರವು ಭಾರತದಲ್ಲಿ ಮೂರನೇ ತರಂಗ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು ಎಂದು ಸಿಎಂ ಕೇಜ್ರಿವಾಲ್ ಹೇಳಿದರು.
ಅರವಿಂದ್ ಕೇಜ್ರಿವಾಲ್ ಮಂಗಳವಾರ ಟ್ವೀಟ್ ಮಾಡಿದ್ದು, ಸಿಂಗಾಪುರದ ಹೊಸ ರೂಪಾಂತರ ಮಕ್ಕಳಿಗೆ ತುಂಬಾ ಅಪಾಯಕಾರಿ ಎಂದು ವಿವರಿಸಲಾಗುತ್ತಿದೆ. ಇದು ಭಾರತದ ಮೂರನೇ ಅಲೆಯಲ್ಲಿ ಕಾಣಿಸಿಕೊಳ್ಳಬಹುದು. ಸಿಂಗಾಪುರದ ವಿಮಾನ ಹಾರಾಟವನ್ನು ತಕ್ಷಣದಿಂದಲೇ ರದ್ದುಪಡಿಸಬೇಕು. ಮಕ್ಕಳಿಗೆ ಲಸಿಕೆ ಆಯ್ಕೆಗಳನ್ನು ಆದ್ಯತೆಯ ಆಧಾರದ ಮೇಲೆ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಮೂರನೇ ಅಲೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಸಾವುನೋವುಗಳಿಗೆ ಕಾರಣವಾಗಬಹುದು. ಅನೇಕ ರಾಜ್ಯಗಳ ಮಕ್ಕಳಿಗೆ ಈಗಾಗಲೇ ಕೊರೊನಾ ಕಾಣಿಸಿಕೊಂಡಿದೆ. ಮೂರನೇ ಅಲೆ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಬರುವ ಮೊದಲೇ ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಳ್ತಿದೆ.
ಈ ಹಿಂದೆ ದೆಹಲಿಯಲ್ಲಿ ಇಬ್ಬರು ಮಕ್ಕಳು ಕೊರೊನಾಗೆ ಸಾವನ್ನಪ್ಪಿದ್ದರು. ಕಳೆದ 15 ದಿನಗಳ ನಡುವೆ, ಅಂದರೆ ಮೇ 1 ರಿಂದ 16 ರವರೆಗೆ 19 ಸಾವಿರ ಮಕ್ಕಳು ಕೊರೊನಾದಿಂದ ಬಳಲುತ್ತಿದ್ದಾರೆ.