ಬ್ಯುಸಿನೆಸ್‌ಮನ್ ಒಬ್ಬರ ಮನೆಯಿಂದ 21 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪದ ಮೇಲೆ 17 ವರ್ಷದ ಹುಡುನೊಬ್ಬನನ್ನು ಮುಂಬೈ ಜೂಹು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂಥದ್ದೇ ಕೃತ್ಯದಲ್ಲಿ ಬಹಳ ದಿನಗಳಿಂದ ಭಾಗಿಯಾಗಿರುವ ಈತ ಕದ್ದ ಮಾಲ್‌ಗಳನ್ನು ಮ್ಯಾನ್‌ಹೋಲ್‌ನಲ್ಲಿ ಬಚ್ಚಿಡುತ್ತಿದ್ದ ಎಂದು ವಿಚಾರಣೆ ಬಳಿಕ ತಿಳಿದು ಬಂದಿದೆ. ಮನೆಯ ಕಿಟಕಿಯೊಂದರ ಗ್ರಿಲ್ ಅನ್ನು ಮುರಿದ ಈತ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದು ಅಲ್ಲಿಂದ ಪರಾರಿಯಾಗುತ್ತಿದ್ದ ಎನ್ನಲಾಗಿದೆ.
FASTag ಕುರಿತು ಮಹತ್ವದ ನಿರ್ಧಾರ: ವಾಹನ ಸವಾರರಿಗೆ ಇನ್ಮುಂದೆ ತಪ್ಪಲಿದೆ ‘ಟೋಲ್’ ಕಿರಿಕಿರಿ
ಪೂಜಾ ದೇವೇಂದ್ರ ಹೆಸರಿನ ವ್ಯಕ್ತಿಯೊಬ್ಬರು ಫೆಬ್ರವರಿ 5ರಂದು ಜೂಹು ಪೊಲೀಸ್ ಠಾಣೆಗೆ ದೂರು ಕೊಟ್ಟು, ತಾವು ತಮ್ಮ ಕುಟುಂಬದೊಂದಿಗೆ ಮಹಬಲೇಶ್ವರಕ್ಕೆ ಹೋಗಿದ್ದ ಸಂದರ್ಭದಲ್ಲಿ ಯಾರೋ ಮನೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ವಿವರಿಸಿದ್ದರು.
9ನೇ ತರಗತಿಯಿಂದ ಡ್ರಾಪ್ ಔಟ್ ಆಗಿರುವ ಈ ಬಾಲಕನಿಗೆ ಮಾಡಲು ಯಾವುದೇ ಕೆಲಸವಿರಲಿಲ್ಲ. ಈತನ ತಂದೆ ಹೊಟ್ಟೆಪಾಡಿಗಾಗಿ ಟೆಂಪೋ ಓಡಿಸುತ್ತಾರೆ. ತನ್ನ ಗೆಳೆಯರೊಂದಿಗೆ ಮೋಜು ಮಾಡಲು ದುಡ್ಡು ಬೇಕಾದಾಗ ಹೀಗೆ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.