ನವದೆಹಲಿ: ಅಡುಗೆ ಎಣ್ಣೆ ದರ ಇಳಿಕೆಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ದರ ನಿಯಂತ್ರಣಕ್ಕಾಗಿ ಅಡುಗೆ ಎಣ್ಣೆ, ಎಣ್ಣೆ ಬೀಗದ ದಾಸ್ತಾನು ಮತ್ತು ಆಮದು ಮೇಲೆ ನಿರ್ಬಂಧ ವಿಧಿಸಲಾಗಿದೆ. ಗಗನಕ್ಕೇರಿರುವ ಅಡುಗೆ ಎಣ್ಣೆ ದರ ಶೀಘ್ರವೇ ಇಳಿಕೆಯಾಗುವ ನಿರೀಕ್ಷೆ ಇದೆ. ಖಾದ್ಯತೈಲ ಬೆಲೆ ತಗ್ಗಿಸಲು ಮುಂದಾಗಿರುವ ಸರ್ಕಾರ ಅವುಗಳ ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದೆ.
ದಾಸ್ತಾನು ನಿಗದಿತ ಮಿತಿ ಮೀರುವಂತಿಲ್ಲ. ಎಣ್ಣೆಯ ಆಮದು ಮತ್ತು ರಫ್ತು ಮಾರ್ಚ್ 31 ರವರೆಗೆ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.
ರಾಜ್ಯಸರ್ಕಾರಗಳು ಅಡುಗೆ ಎಣ್ಣೆ ದಾಸ್ತಾನು ಮಿತಿ ಎಷ್ಟು ಎಂಬುದನ್ನು ನಿರ್ಧರಿಸಲು ತಿಳಿಸಲಾಗಿದೆ. ಲಭ್ಯತೆ ಆಧರಿಸಿ ದಾಸ್ತಾನು ಮಿತಿ ನಿಗದಿ ಮಾಡುವಂತೆ ತಿಳಿಸಲಾಗಿದೆ. ಈ ಕ್ರಮದಿಂದ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಮತ್ತಷ್ಟು ಕಡಿಮೆಯಾಗಲಿದೆ.