ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಘನತೆಗೆ ಭಂಗ ತರುವಂತಹ ದೃಶ್ಯಗಳ ಬಗ್ಗೆ ಆಕ್ಷೇಪಗಳು ಕೇಳಿಬಂದ 24 ಗಂಟೆಗಳ ಒಳಗಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆಗಳು ಅದನ್ನ ತೆಗೆದು ಹಾಕಬೇಕು ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ರಾಜ್ಯ ಸಭೆಯಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಅನುಸಾರ ಮಹಿಳೆಯರ ನಗ್ನ ಇಲ್ಲವೇ ಮೊರ್ಫಡ್ ಫೋಟೋಗಳ ಬಗ್ಗೆ ಆಕ್ಷೇಪ ಕಂಡುಬಂದಲ್ಲಿ ಅದನ್ನ 24 ಗಂಟೆ ಅವಧಿ ಒಳಗಾಗಿ ತೆಗೆದುಹಾಕಬೇಕು ಎಂದು ಹೇಳಿದ್ರು.
ಇಂತಹ ಪ್ರಕರಣಗಳು ಸಾಮಾಜಿಕ ಮಾಧ್ಯಮಗಳ ಬಳಕೆಗೆ ಉದಾಹರಣೆಗಳಲ್ಲ ಬದಲಾಗಿ ಸಾಮಾಜಿಕ ಮಾಧ್ಯಮಗಳನ್ನ ದುರುಪಯೋಗ ಮಾಡಿದ ಬಗ್ಗೆ ಉದಾಹರಣೆ ಆಗಿದೆ ಎಂದು ಹೇಳಿದ್ರು.