alex Certify ಟ್ವಿಟರ್​ ಬಳಿಕ ಇದೀಗ ಯುಟ್ಯೂಬ್​ನಲ್ಲಿ ರೈತ ಪ್ರತಿಭಟನೆ ಪರ ವಿಡಿಯೋಗಳಿಗೆ ಬ್ರೇಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ ಬಳಿಕ ಇದೀಗ ಯುಟ್ಯೂಬ್​ನಲ್ಲಿ ರೈತ ಪ್ರತಿಭಟನೆ ಪರ ವಿಡಿಯೋಗಳಿಗೆ ಬ್ರೇಕ್…!

ಗೂಗಲ್​ ಒಡೆತನದ ಯುಟ್ಯೂಬ್​​ ಮಂಗಳವಾರ ಪ್ರಸಿದ್ಧ ಪಂಜಾಬಿ ಗಾಯಕ ಕನ್ವರ್​ ಗ್ರೆವಾಲ್​ರ ಐಲಾನ್​ ಎಂಬ ಮ್ಯೂಸಿಕ್​ ವಿಡಿಯೋವನ್ನ ಅಳಿಸಿ ಹಾಕಿದೆ.

60 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದ್ದ ಈ ವಿಡಿಯೋ ರೈತ ಪ್ರತಿಭಟನೆಗೆ ಸಂಬಂಧಿಸಿದೆ ಎಂಬ ಕಾರಣ ನೀಡಿ ವಿಡಿಯೋವನ್ನ ಅಳಿಸಿಹಾಕಲಾಗಿದೆ.‌

ಸರ್ಕಾರದಿಂದ ದೂರು ಬಂದ ಕಾರಣ ಈ ವಿಡಿಯೋ ಲಭ್ಯವಿಲ್ಲ ಎಂದು ಯುಟ್ಯೂಬ್​ ಅಧಿಸೂಚನೆಯನ್ನ ಪ್ರಕಟಿಸಿದೆ.

ಕಾನೂನು ಉಲ್ಲಂಘನೆ ಮಾಡುವ ವಿಷಯಗಳು ಗಮನಕ್ಕೆ ಬಂದಲ್ಲಿ ಅದನ್ನ ತ್ವರಿತಗತಿಯಲ್ಲಿ ಅಳಿಸಿ ಹಾಕುತ್ತೇವೆ ಎಂದು ಯುಟ್ಯೂಬ್​ ವಕ್ತಾರ ಮಾಹಿತಿ ನೀಡಿದ್ದಾರೆ. ಆದರೆ ಯುಟ್ಯೂಬ್​ ಅಳಿಸಿ ಹಾಕಿರುವ ಈ ಹಾಡು ಬೇರೆ ಬೇರೆ ಯುಟ್ಯೂಬ್​ ಚಾನೆಲ್​ಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಬೇರೆ ಚಾನೆಲ್​ಗಳಲ್ಲಿರುವ ಈ ಐಲಾನ್​ ಹಾಡನ್ನ ಯುಟ್ಯೂಬ್​ ಅಳಿಸಿ ಹಾಕುವ ಸಾಧ್ಯತೆ ಇದೆ.

ಇನ್ನು ಯುಟ್ಯೂಬ್​ನಲ್ಲಿ 1.3 ಕೋಟಿ ವೀಕ್ಷಣೆ ಪಡೆದಿರುವ ಹಿಮ್ಮತ್​ ಸಂಧು ಅವರ ಎಸಿ ವಡ್ಡೆಂಗೇ ಎಂಬ ಶೀರ್ಷಿಕೆಯ ಮತ್ತೊಂದು ಪಂಜಾಬಿ ಹಾಡಿನ ವಿಡಿಯೋಗೂ ಯುಟ್ಯೂಬ್​ನಲ್ಲಿ ನಿರ್ಬಂಧ ಹೇರಲಾಗಿದೆ.

ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪೋಸ್ಟ್​ಗಳನ್ನ ಹರಿಬಿಡುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಟ್ವಿಟರ್​ ಇಂಡಿಯಾ ಪಾಕ್​ ಬೆಂಬಲಿತ 1178 ಖಾತೆಗಳನ್ನ ನಿರ್ಬಂಧಿಸಿದೆ. ಈ ಬೆನ್ನಲ್ಲೇ ಇದೀಗ ಯುಟ್ಯೂಬ್​ ಕೂಡ ರೈತ ಬೆಂಬಲಿತ ವಿಡಿಯೋಗಳನ್ನ ಅಳಿಸಿ ಹಾಕಲು ಮುಂದಡಿ ಇಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...