ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ಹಾಗೂ ಮಾಜಿ ಸಚಿವ ಸಜ್ಜನ್ ಸಿಂಗ್ ವರ್ಮಾ ನಡುವೆ ಮಧ್ಯ ಪ್ರದೇಶದಲ್ಲಿ ಮಾತಿನ ಜಟಾಪಟಿ ಜೋರಾಗಿದೆ.
ಮತ್ತೊಮ್ಮೆ ಸಜ್ಜನ್ ಸಿಂಗ್ ವರ್ಮಾ ವಿಜಯ್ ವರ್ಗೀಯ ವಿರುದ್ಧ ಹರಿಹಾಯ್ದಿದ್ದು, ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ರಚನೆಯಾಗಲಿದೆ ಹಾಗೂ ಕೈಲಾಶ್ ವಿಜಯವರ್ಗೀಯ ಮಮತಾ ಬ್ಯಾನರ್ಜಿ ಪಾದಕ್ಕೆ ಬಿದ್ದು ಕ್ಷಮೆಯಾಚಿಸಲಿದ್ದಾರೆ ಅಲ್ಲದೇ ದೀದಿ ನೀವೇ ಮುಖ್ಯಮಂತ್ರಿಯಾಗಿ ಎಂದು ಹೇಳಲಿದ್ದಾರೆ ಅಂತಾ ಭವಿಷ್ಯ ನುಡಿದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಸಜ್ಜನ್ ಸಿಂಗ್ ವರ್ಮಾ ಯುವತಿಯರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಹೆಣ್ಣು ಮಕ್ಕಳ ಮದುವೆ ವಯಸ್ಸನ್ನ 18 ರಿಂದ 21ಕ್ಕೆ ಏರಿಸುವ ವಿಚಾರದ ವಿರುದ್ಧ ಮಾತನಾಡಿದ ವರ್ಮಾ, ಹೆಣ್ಣು ಮಕ್ಕಳಿಗೆ 15 ವರ್ಷಕ್ಕೇ ಮಗುವನ್ನ ಹೆರುವ ಸಾಮರ್ಥ್ಯ ಬರುತ್ತೆ ಅಂದಮೇಲೆ 21 ವರ್ಷಕ್ಕೆ ಮದುವೆ ವಯಸನ್ನ ಏರಿಸೋದು ಏಕೆ ಎಂದು ಪ್ರಶ್ನೆ ಮಾಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.