
ಜೈಪುರ್: ರಾಜಸ್ತಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಮಾಜಿ ಡಿಸಿಎಂ ಸಚಿನ್ ಪೈಲಟ್ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕ ಗಿರಿರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅಡ್ಡ ಮತದಾನ ಮಾಡುವಂತೆ ಸಚಿನ್ ಪೈಲಟ್ ನನಗೆ ಕರೆ ಮಾಡಿದ್ದರು. ಇದಕ್ಕಾಗಿ 35 ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದರು. ನಾನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಮೋಸ ಮಾಡುವುದಿಲ್ಲವೆಂದು ಅವರಿಗೆ ಹೇಳಿ ಆಫರ್ ತಿರಸ್ಕರಿಸಿದ್ದೆ ಎಂದು ತಿಳಿಸಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಪಕ್ಷವನ್ನು ತೊರೆಯುವ ಮಾತೇ ಇಲ್ಲ. ಬಿಜೆಪಿಯಿಂದ ಕೋಟಿಗಟ್ಟಲೇ ಹಣ ಆಫರ್ ಮಾಡಿದ್ದರೂ ನಾನು ಹೋಗಲ್ಲವೆಂದು ತಿಳಿಸಿದ್ದಾರೆ.