ಚೆನ್ನೈ: ಕೊರೊನಾ ಕಾರಣದಿಂದ ಲಾಕ್ ಡೌನ್ ಉಂಟಾದಾಗ ಅನಿವಾರ್ಯವಾಗಿ ಮನೆಯಲ್ಲಿರಬೇಕಾದ ಜನ ಸುಮ್ಮನೇ ಕುಳಿತಿಲ್ಲ. ಹಾಗಿದ್ರೆ, ಮಾಡಿದ ಕೆಲಸವೇನು..? ಈ ವರದಿ ಓದಿದ್ರೆ ದಂಗಾಗ್ತೀರ. 2020 ರಲ್ಲಿ ಜನ ಕಾಂಡೋಮ್ ಹಾಗೂ ಮಾದಕ ದ್ರವ್ಯ ಸೇವನೆಗೆ ಬಳಸುವ ರೋಲಿಂಗ್ ಪೇಪರನ್ನು ಅತಿ ಹೆಚ್ಚು ಬಳಸಿದ್ದಾಗಿ ಅಧ್ಯಯನ ವರದಿ ಹೇಳಿದೆ.
ಕರ್ನೈ ಸರ್ವೀಸಸ್ ಅಪ್ಲಿಕೇಶನ್ ಡಂಜೊ ಎಂಬ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ದೇಶದಲ್ಲಿ ಹಗಲಿನ ವೇಳೆಯೇ ಕಾಂಡೋಮ್ ಖರೀದಿಸುವ ಪ್ರಮಾಣ 3 ಪಟ್ಟು ಏರಿಕೆಯಾಗಿದೆ. ಹೈದ್ರಾಬಾದ್ ನಲ್ಲಿ 6, ಚೆನ್ನೈನಲ್ಲಿ 5, ಜೈಪುರದಲ್ಲಿ 4, ಮುಂಬೈನಲ್ಲಿ 3 ಪಟ್ಟು ಖರೀದಿ ಹೆಚ್ಚಿದೆ.
22 ಪಟ್ಟು ಹೆಚ್ಚು ರೋಲಿಂಗ್ ಪೇಪರನ್ನು ಜನ ಖರೀದಿಸಿದ್ದಾರೆ. ಗರ್ಭ ನಿರೋಧಕ ಮಾತ್ರೆಗಳ ಖರೀದಿಯಲ್ಲಿ ಪುಣೆ, ಹೈದ್ರಾಬಾದ್, ಬೆಂಗಳೂರು, ಗುರುಗ್ರಾಮ ಮುಂತಾದ ಮಹಾ ನಗರಗಳು ಮುಂಚೂಣಿಯಲ್ಲಿವೆ ಎಂದು ವರದಿ ಹೇಳಿದೆ.