’ಅಲಾದೀನನ ದೀಪ’ ಎಂದುಕೊಂಡು ವೈದ್ಯರೊಬ್ಬರಿಗೆ 31 ಲಕ್ಷ ರೂ.ಗಳಿಗೆ ವಸ್ತುವೊಂದನ್ನು ಮಾರಾಟ ಮಾಡಿ ವಂಚಿಸಿದ್ದ ಇಬ್ಬರು ವಂಚಕರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮಧ್ಯ ಪೂರ್ವದ ಜನಪದ ಕಥೆಗಳಲ್ಲಿ ಬರುವ ಪಾತ್ರಧಾರಿಯಾದ ಅಲಾದೀನ್‌ನ ದೀಪವು ಕೇಳಿದ್ದನ್ನು ಕೊಡುತ್ತದೆ ಎಂದು ನಂಬಲಾಗಿದೆ. ದೀಪದಿಂದ ಉಗಮವಾದ ಮಾಯಾಸ್ವರೂಪಿಯೊಂದು ಕೇಳಿದ್ದನ್ನು ಕೊಡುತ್ತದೆ ಎಂದು ನಂಬಲಾಗಿದೆ.
ಇಕ್ರಮುದ್ದೀನ್ ಹಾಗೂ ಅನೀಸ್ ಎಂಬ ಹೆಸರಿನ ವಂಚಕರ ವಯಸ್ಕ ತಾಯಿಗೆ ಚಿಕಿತ್ಸೆ ಕೊಡುತ್ತಿದ್ದ ಡಾ. ಎಲ್.ಎ. ಖಾನ್‌ಗೆ ಇಬ್ಬರೂ ಸೇರಿಕೊಂಡು ತಲೆ ಕೆಡಿಸಿದ್ದಾರೆ. ತಮ್ಮ ಬಾಬಾನನ್ನು ಭೇಟಿಯಾದರೆ ಆತ ಮಾಡುವ ಮಾಯಾವಿ ಕೆಲಸಗಳನ್ನು ನೋಡಬಹುದು ಎಂದು ವೈದ್ಯ ಖಾನ್ ನಂಬುವಂತೆ ಮಾಡಿದ್ದಾರೆ ವಂಚಕರು.
ಈ ದೀಪವು 1.5 ಕೋಟಿ ರೂ. ಮೌಲ್ಯದ್ದಾಗಿದ್ದು, ಮನೆಯಲ್ಲಿ ಇಟ್ಟುಕೊಂಡರೆ ಅಗಾಧವಾದ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದ್ದ ವಂಚಕರ ಮಾತು ನಂಬಿದ್ದ ವೈದ್ಯ ಖಾನ್, 31 ಲಕ್ಷ ರೂ.ಗಳಿಗೆ ಚೌಕಾಸಿ ಮಾಡಿ ವ್ಯಾಪಾರ ಮಾಡಿದ್ದರು. ಆಪಾದಿತರಲ್ಲಿ ಒಬ್ಬನು ಅಲಾದೀನ್‌ನ ಧಿರಿಸಿನಲ್ಲಿ ಬಂದು, ಆ ದೀಪದಿಂದ ಬಂದಿರುವುದಾಗಿ ಹೇಳಿದ್ದನ್ನು ನಂಬಿದ್ದ ವೈದ್ಯರು ಮೋಸ ಹೋಗಿದ್ದರು.