ನವದೆಹಲಿ: ಹೆಣ್ಣುಮಕ್ಕಳ ಮದುವೆಗೆ 18 ವರ್ಷಗಳ ವಯೋಮಿತಿ ಇದೆ. ಇದಕ್ಕೆ ಮೊದಲು 15 ವರ್ಷ ವಯೋಮಿತಿ ಇತ್ತು. ಈಗ ವಯೋಮಿತಿ ಹೆಚ್ಚಳಕ್ಕೆ ಜಯಾ ಜೇಟ್ಲಿ ನೇತೃತ್ವದ ಸಮಿತಿ ರಚಿಸಲಾಗಿದೆ.
ನೀತಿ ಆಯೋಗದ ಸದಸ್ಯರನ್ನು ಒಳಗೊಂಡಿರುವ ಸಮಿತಿ ಮದುವೆ ವಯಸ್ಸನ್ನು 21ಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಿದೆ. ಹೆಣ್ಣುಮಕ್ಕಳ ಆರೋಗ್ಯದ ಮೇಲೆ ಮದುವೆ ಪರಿಣಾಮ ಬೀರುವ ಅಂಶಗಳ ಅಧ್ಯಯನ ನಡೆಸಲಾಗಿದೆ. ಪೌಷ್ಟಿಕತೆ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಉನ್ನತ ಶಿಕ್ಷಣ ಪ್ರೋತ್ಸಾಹಿಸುವ ಅಂಶಗಳ ಬಗ್ಗೆಯೂ ಪರಿಶೀಲಿಸಲಾಗಿದ್ದು ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 21 ವರ್ಷಕ್ಕೆ ಏರಿಕೆ ಮಾಡಲಾಗುವುದು. ಇದಿನ್ನೂ ಅಧಿಕೃತವಾಗಿಲ್ಲ.
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಬಗ್ಗೆ ಪ್ರಧಾನಿ ಮೋದಿ ಸುಳಿವು ನೀಡಿದ್ದಾರೆ. ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿ ಬಗ್ಗೆ ತಜ್ಷರ ಸಮಿತಿ ಪರಿಶೀಲನೆ ನಡೆಸಿದ್ದು, ಅದನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.