ಹಿಂದೂ ದೇವರುಗಳ ಮೇಲೆ ಅಪಹಾಸ್ಯ ಮಾಡಿದ ಆರೋಪದಡಿಯಲ್ಲಿ ಜೈಲು ಪಾಲಾಗಿದ್ದ ಕಾಮಿಡಿನ್ ಮುನಾವರ್ ಫಾರೂಕಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಹಾಗೆಯೇ ಮಧ್ಯ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಈ ಹಿಂದೆ ಮೂರು ಬಾರಿ ಮುನಾವರ್ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಮಧ್ಯ ಪ್ರದೇಶ ಹೈಕೋರ್ಟ್ ಜನವರಿ 28ರಂದು ಜಾಮೀನು ನೀಡಲು ನಿರಾಕರಿಸಿತ್ತು.
ಕಾರು ಪ್ರಿಯರಿಗೆ ಗುಡ್ ನ್ಯೂಸ್: ಮಾರುತಿ ಸುಜುಕಿಯಿಂದ ಗ್ರಾಹಕರಿಂದ ಫೆಬ್ರವರಿ ಧಮಕಾ….!
ಇಂದೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಮಿಡಿಯನ್ ಮುನಾವರ್ ಫಾರೂಕಿ ಹಿಂದೂ ದೇವರಿಗೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಅಪಮಾನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕನ ಪುತ್ರ ದೂರನ್ನ ಸಲ್ಲಿಸಿದ್ದರು. ಈ ದೂರನ್ನ ಆಧರಿಸಿ ಫಾರೂಕಿ ಸೇರಿದಂತೆ ಇತರೆ ನಾಲ್ವರನ್ನ ಬಂಧಿಸಲಾಗಿತ್ತು.