ಕಠಿಣ ಪರಿಸ್ಥಿತಿಗಳಲ್ಲಿ ನಾವು ಬಹಳಷ್ಟು ಪಾಠಗಳನ್ನು ಕಲಿಯುತ್ತೇವೆ. ನಮ್ಮಂತೆಯೇ ಬೇರೆಯವರಿಗೂ ಸಹ ಭಾವನೆಗಳಿದ್ದು, ಅವರಿಗೂ ಸಹಾಯದ ಅಗತ್ಯವಿರುತ್ತದೆ ಎಂದು ನಮಗೆ ಹೆಚ್ಚು ಅರಿವಾಗುವುದೇ ಆ ಸಂದರ್ಭಗಳಲ್ಲಿ.
ಕೊಯಮತ್ತೂರಿನ ಪುಲಿಯಾಕುಳಂನ ಮಹಿಳೆಯೊಬ್ಬರು ಕಷ್ಟದಲ್ಲಿರುವ ಜನರಿಗೆ ಆಹಾರ ಪೂರೈಸುತ್ತಾ ಬಂದಿದ್ದಾರೆ. ಮೇಜೊಂದರ ಮೇಲೆ ಜನರಿಗೆ ಉಣಬಡಿಸಲೆಂದು ಇಟ್ಟಿರುವ ಆಹಾರದ ಪೊಟ್ಟಣಗಳಿರುವ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. “ನಿಮಗೆ ಹಸಿವಾದಲ್ಲಿ, ಇದನ್ನು ತೆಗೆದುಕೊಳ್ಳಿ” ಎಂದು ಇವರು ಬರೆದಿರುವುದನ್ನು ನೋಡಬಹುದಾಗಿದೆ.
ಆರ್‌ಜೆ ಬಾಲಾಜಿ ಅವರ ಮೂಲಕ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. “ರಸ್ತೆ ಬದಿಯ ಬಿರಿಯಾನಿ ಶಾಪ್‌ನಿಂದ ಎಂಥ ಶ್ರೇಷ್ಠ ಕೆಲಸ…! ಮಾನವೀಯತೆ ಅದರ ಉತ್ತುಂಗದಲ್ಲಿ” ಎಂದು ತಮ್ಮ ಪೋಸ್ಟ್‌ಗೆ ಕ್ಯಾಪ್ಷನ್ ಹಾಕಿದ್ದಾರೆ ಬಾಲಾಜಿ.
https://twitter.com/KaviPinkyGirl/status/1382598362449383424?ref_src=twsrc%5Etfw%7Ctwcamp%5Etweetembed%7Ctwterm%5E1382598362449383424%7Ctwgr%5E%7Ctwcon%5Es1_&ref_url=https%3A%2F%2Ffood.ndtv.com%2Fnews%2Fcoimbatore-woman-wins-hearts-by-selling-free-biryani-for-poor-2414464