ಮಹಾತ್ಮಾ ಗಾಂಧಿಯವರ 151ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಜನರು ಬಾಪುವಿನ ಜೀವನವನ್ನು ಸ್ಮರಿಸಿದ್ದಾರೆ. ಗಾಂಧಿಯ ಅಹಿಂಸಾ ತತ್ವಗಳನ್ನು ಆದರಿಸುವ ಪ್ರಯುಕ್ತ ವಿಶ್ವ ಸಂಸ್ಥೆಯು ಅಕ್ಟೋಬರ್ 2ನ್ನು ಅಹಿಂಸಾ ದಿನವನ್ನಾಗಿ ಘೋಷಣೆ ಮಾಡಿದೆ.
ತಮಿಳುನಾಡಿನ ಕೊಯಮತ್ತೂರಿನ ಕಲಾವಿದರೊಬ್ಬರು ಬಾಪುರ ಜನ್ಮದಿನದ ಪ್ರಯುಕ್ತ ಮೀನಿನ ತೊಟ್ಟಿಯೊಂದರಲ್ಲಿ ಅವರ ಚಿತ್ರವನ್ನು ಆಲ್ಗೇಯಿಂದ ಬಿಡಿಸಿದ್ದಾರೆ. ಟ್ಯಾಂಕ್ ತುಂಬಾ ಬೆಳೆದಿದ್ದ ಆಲ್ಗೇಯನ್ನು ಕಲಾತ್ಮಕವಾಗಿ ಉಜ್ಜಿ ತೆಗೆದು ಈ ಚಿತ್ರವನ್ನು ಬಿಡಿಸಲಾಗಿದೆ.
“ವೈವಿಧ್ಯತೆಯಲ್ಲಿ ಐಕ್ಯತೆ ಕಾಣುವ ದೇಶವನ್ನು ಬಿಂಬಿಸಲು ಮೀನಿನ ಟ್ಯಾಂಕ್ ಒಳಗೆ ವಿವಿಧ ಬಣ್ಣದ ಮೀನುಗಳನ್ನು ಟ್ಯಾಂಕ್‌ನಲ್ಲಿ ಸೇರಿಸಿದ್ದೇನೆ” ಎಂದು ಕಲಾವಿದ ತಿಳಿಸಿದ್ದಾರೆ.
ಇದೇ ವೇಳೆ ಪುರಿ ಕಡಲತೀರದಲ್ಲಿ ಪ್ರಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಮರಳಿನಲ್ಲಿ ಗಾಂಧಿ ಚಿತ್ರ ಬಿಡಿಸಿ, ಮಹಾತ್ಮರ ಅಹಿಂಸಾ ತತ್ವಗಳನ್ನು ಸಾರಿದ್ದಾರೆ.