ಕೊರೊನಾ ಲಸಿಕೆಯ ಡ್ರೈ ರನ್ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶನಿವಾರದಿಂದ ಶುರುವಾಗಿದೆ. ಈ ಮಧ್ಯೆ ಕೋವಿಡ್ -19 ಲಸಿಕೆ ವಿತರಣೆಯ ಮೇಲ್ವಿಚಾರಣೆ ಮಾಡಲು, ಡೇಟಾವನ್ನು ಭದ್ರಗೊಳಿಸಲು ಮತ್ತು ಲಸಿಕೆಗಾಗಿ ಜನರ ಹೆಸರು ನೋಂದಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಕೋವಿನ್ ಹೆಸರಿನ ಅಪ್ಲಿಕೇಶನ್ ರಚಿಸಿದೆ.
ಆರೋಗ್ಯ ಕಾರ್ಯಕರ್ತರಲ್ಲದ ದೇಶದ ನಾಗರಿಕರು ಕೋವಿನ್ ಅಪ್ಲಿಕೇಶನ್ನಲ್ಲಿ ಲಸಿಕೆಗಾಗಿ ಸ್ವಯಂ ಹೆಸರು ನೋಂದಾಯಿಸಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ನಿಂದ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು. ವ್ಯಾಕ್ಸಿನೇಷನ್ ಜನಸಾಮಾನ್ಯರಿಗೆ ನೀಡಲು ಶುರುವಾದ ಮೇಲೆ ಈ ಅಪ್ಲಿಕೇಷನ್ ನಲ್ಲಿ ಹೆಸರು ನೋಂದಾಯಿಸಿದವರಿಗೆ ಲಸಿಕೆ ಬೇಗ ಸಿಗಲಿದೆ.
ಪ್ಲೇ ಸ್ಟೋರ್ ನಲ್ಲಿ ಇದು ಉಚಿತವಾಗಿ ಲಭ್ಯವಿದೆ. ಮೂರು ಹಂತದಲ್ಲಿ ಲಸಿಕೆ ವಿತರಣೆಯಾಗಲಿದೆ ಎಂದು ಸರ್ಕಾರ ಹೇಳಿದೆ. ಮೊದಲು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಸಿಗಲಿದೆ. ಎರಡನೇಯದಾಗಿ ತುರ್ತು ಸೇವೆಗಳಿಗೆ ಸಂಬಂಧಿಸಿದವರಿಗೆ ಸಿಗಲಿದೆ. ಮೂರನೇ ಹಂತದಲ್ಲಿ ಗಂಭೀರ ರೋಗದಿಂದ ಬಳಲುತ್ತಿರುವವರಿಗೆ ಲಸಿಕೆ ಸಿಗಲಿದೆ. ರಾಜ್ಯ ಸರ್ಕಾರಗಳು ಜನರ ಡೇಟಾ ಸಂಗ್ರಹಿಸುತ್ತಿದೆ. ಹಾಗಾಗಿ ಅಪ್ಲಿಕೇಷನ್ ನಲ್ಲಿ ಹೆಸರು ನೋಂದಾಯಿಸುವುದು ಅನಿವಾರ್ಯವಾಗಲಿದೆ. ಸ್ವಯಂ ಹೆಸರು ನೋಂದಾವಣೆಗೆ ಫೋಟೋ ಇರುವ ಒಂದು ಗುರುತಿನ ಚೀಟಿಯನ್ನು ನೀಡಬೇಕಾಗುತ್ತದೆ. ಆನ್ಲೈನ್ ನೋಂದಣೆ ನಂತ್ರ ಮೊಬೈಲ್ ನಂಬರ್ ಗೆ ಎಸ್ಎಂಎಸ್ ಬರಲಿದೆ.