ಕೋಟ್ಯಾಂತರ ಜನರ ಬಹುಕಾಲದ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 5 ರ ಬುಧವಾರದಂದು ಶಿಲಾನ್ಯಾಸ ಮಾಡಿದ್ದಾರೆ.
ಮುಂದಿನ ಮೂರು ವರ್ಷಗಳೊಳಗಾಗಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಲಿದ್ದು, ಇದಕ್ಕಾಗಿ ಈಗಾಗಲೇ ಎಲ್ಲ ಸಿದ್ಧತೆಗಳು ನಡೆದಿವೆ. ಬುಧವಾರದಂದು ನಡೆದ ಭೂಮಿ ಪೂಜೆ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋದಂಡರಾಮ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮೋದಿಯವರಿಗೆ ನೀಡಲಾದ ಸುಂದರವಾದ ಕೋದಂಡರಾಮ ಮೂರ್ತಿಗೆ ಕರುನಾಡಿನ ನಂಟಿರುವುದು ವಿಶೇಷ. ಹೌದು, ಈ ಮೂರ್ತಿಯ ಶಿಲ್ಪಿ ಮೂಲತಃ ಮೈಸೂರಿನವರಾದ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಿ ಟಿ. ರಾಮಮೂರ್ತಿ. ಉತ್ತರ ಪ್ರದೇಶ ಸರ್ಕಾರದ ಮನವಿ ಮೇರೆಗೆ ಅವರು ಈ ಮೂರ್ತಿಯನ್ನು ಮಾಡಿಕೊಟ್ಟಿದ್ದಾರೆ.