ಇಡೀ ಜಗತ್ತಿನಲ್ಲಿ ಮನುಷ್ಯ ತಾನೊಬ್ಬನೇ ಬುದ್ಧಿವಂತ ಎಂದುಕೊಂಡಿದ್ದಾನೆ. ಸಾಲದ್ದಕ್ಕೆ ಆಗಾಗ್ಗೆ ಅದನ್ನು ಪ್ರದರ್ಶನ ಕೂಡ ಮಾಡುತ್ತಿರುತ್ತಾನೆ.
ಆದರೆ, ಮಿಕ್ಕೆಲ್ಲ ಪ್ರಾಣಿಗಳಿಗೂ ಬುದ್ಧಿವಂತಿಕೆ ಇದೆ. ಹಾಗೆಂದು ಯಾವಾಗಲೂ ಪ್ರದರ್ಶಿಸುವುದಿಲ್ಲ. ತಂತಮ್ಮ ಶಕ್ತ್ಯನುಸಾರ ಅಗತ್ಯಕ್ಕೆ ತಕ್ಕಂತೆ ಬುದ್ಧಿವಂತಿಕೆಯನ್ನ ಬಳಸಿಕೊಳ್ಳುತ್ತವೆ.
ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಕುಬ್ಜವಾಗಿರುವ ಮೇಕೆ ಎತ್ತರದ ಮರವೇರಿ ಸೊಪ್ಪು ತಿನ್ನಲಾಗದೆ ಪರಿತಪಿಸುತ್ತಿತ್ತು.
ಅದಕ್ಯಾವ ಏಣಿ ಇದೆ ಹತ್ತಿ ಹೋಗಲು ? ಅದಕ್ಯಾವ ಗಳ ಇದೆ ಕೊಯ್ದು ತಿನ್ನಲು ?
ಅಲ್ಲೇ ಮರಕ್ಕೆ ಕಟ್ಟಿ ಹಾಕಿದ್ದ ಕೋಣದ ಬೆನ್ನೇರಿದ ಮೇಕೆ, ಮರದಲ್ಲಿನ ಎಲೆಗಳನ್ನು ಹರಿದು ತಿಂದು, ಹೊಟ್ಟೆ ಹೊರೆಯಿತು.
ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಹೀಗೆ ಸಹಾಯ ಮಾಡುವುದನ್ನು ಸಿನಿಮಾ, ಕಥೆ, ಕಾರ್ಟೂನ್ ಗಳಲ್ಲಿ ನೋಡಿದ್ದೆವು. ಆದರೆ, ಇಂತಹ ಪ್ರಸಂಗಗಳು ನಮ್ಮ ನಡುವೆಯೇ ನಡೆದಾಗ ವೈರಲ್ ಆಗದೇ ಇರುತ್ತದೆಯೇ ? ಐಎಫ್ಎಸ್ ಅಧಿಕಾರಿ ಸುಧಾ ರಮೆನ್ ಪೋಸ್ಟ್ ಮಾಡಿರುವ ಈ ವಿಡಿಯೋವನ್ನು 13 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದು, 1200 ಕ್ಕಿಂತ ಅಧಿಕ ಮಂದಿ ಮೆಚ್ಚಿಕೊಂಡಿದ್ದಾರೆ.