
ಈ ಮೊದಲು ಸೆಪ್ಟೆಂಬರ್ 21 ರಿಂದ ಶಾಲಾ – ಕಾಲೇಜುಗಳನ್ನು ಆರಂಭಿಸಿ 9 ರಿಂದ 12 ನೇ ತರಗತಿವರೆಗಿನ ಮಕ್ಕಳು ತಮ್ಮ ಶಿಕ್ಷಕರ ಬಳಿ ತೆರಳಿ ಪಠ್ಯಗಳ ಕುರಿತ ಅನುಮಾನಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡಲಾಗಿದ್ದು, ಇದೀಗ ಪದವಿ ಮತ್ತು ಸ್ನಾತಕೋತ್ತರ ಪದವಿ ಮೊದಲ ವರ್ಷದ ಕೋರ್ಸ್ ಆರಂಭಿಸುವ ಕುರಿತು ಮತ್ತೊಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಈ ಕುರಿತು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದ್ದು, ಪ್ರವೇಶಾತಿ ಪ್ರಕ್ರಿಯೆಯನ್ನು ಅಕ್ಟೋಬರ್ 31 ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ. ನವೆಂಬರ್ 1ರಿಂದ ಮೊದಲ ವರ್ಷದ ಕೋರ್ಸ್ ಆರಂಭಿಸಲು ತಿಳಿಸಲಾಗಿದ್ದು, ಈ ಕುರಿತು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.