ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಜಾರಿಗೆ ತಂದಿತ್ತು. ಈ ವೇಳೆ ಅನೇಕ ವಲಸಿಗರು ತಮ್ಮ ಗ್ರಾಮಕ್ಕೆ ವಾಪಸ್ ಆಗಿದ್ದರು. ಇನ್ನು ಅನೇಕರು ಕೆಲಸವಿಲ್ಲದೆ ಹಸಿವಿನಿಂದ ಬಳಲುತ್ತಿದ್ದರು. ಅವರಿಗೆ ಸಹಾಯ ಮಾಡಲು ಅನೇಕರು ಮುಂದಾಗಿದ್ದರು. ಅದ್ರಲ್ಲಿ ದೆಹಲಿಯ ನಾಗರಿಕ ರಕ್ಷಣಾ ಸ್ವಯಂಸೇವಕ ಅರುಣ್ ಸಿಂಗ್ ಒಬ್ಬರು.
ಏಪ್ರಿಲ್‌ನಿಂದ ಅವರು ವಲಸೆ ಕಾರ್ಮಿಕರಿಗಾಗಿ ಪ್ರತಿದಿನ ಬೀದಿ ಬೀದಿ ತಿರುಗಿ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದರು. ಈಗ 3 ತಿಂಗಳ ನಂತರ, ಅವರು ಕೊರೊನಾ ವೈರಸ್ಗೆ ಬಲಿಯಾಗಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್‌ನ ಸುದ್ದಿಯ ಪ್ರಕಾರ, ಜುಲೈ ಆರಂಭದಲ್ಲಿ ಪರೀಕ್ಷೆ ನಡೆಸಿದಾಗ ಅರುಣ್ ಸಿಂಗ್ ಗೆ ಕೊರೊನಾ ಇರುವುದು ದೃಢಪಟ್ಟಿತ್ತು. ಜುಲೈ 4 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಸೋಮವಾರ ಅವರು ದ್ವಾರಕಾದ ವೆಂಕಟೇಶ್ವರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ಮೂರು ತಿಂಗಳಿನಿಂದ ಪ್ರತಿದಿನ ಜನರಿಗೆ ಆಹಾರವನ್ನು ವಿತರಿಸುತ್ತಿದ್ದ ವ್ಯಕ್ತಿಯನ್ನು ಕೊರೊನಾ ಬಲಿ ಪಡೆದಿರುವುದು ಬೇಸರದ ಸಂಗತಿ.