ಆಹಾರ ಉತ್ಪನ್ನಗಳಲ್ಲಿ ಪ್ರತಿನಿತ್ಯ ಹೊಸತನ್ನು ಪ್ರಯೋಗಿಸಿ ನೋಡುವುದು ಇತ್ತೀಚಿಗೆ ಭಾರೀ ಟ್ರೆಂಡ್ ಆಗುತ್ತಿದೆ.
ನ್ಯುಟೆಲ್ಲಾ ಬಿರಿಯಾನಿಯಿಂದ ಮ್ಯಾಗಿ ಪಾನಿ ಪೂರಿವರೆಗೂ ಚಿತ್ರವಿಚಿತ್ರ ಫ್ಯೂಶನ್‌ಗಳನ್ನೆಲ್ಲಾ ನಾವು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ, ತಿನ್ನುತ್ತಿದ್ದೇವೆ.
ಇದೀಗ ಕೇರಳ ಮೂಲದ ಡೈರಿ ಡೇ ಕಂಪನಿಯು ವಿಶೇಷ ಐಸ್ ಕ್ರೀಮ್ ಒಂದನ್ನು ಹೊರತಂದಿದ್ದು, ಅದಕ್ಕೆ ಆರೋಗ್ಯಕರ ಫ್ಲೇವರ್ ಕೊಡುವ ಯತ್ನದಲ್ಲಿ ಚ್ಯವನ್‌ಪ್ರಾಶ ಹಾಗೂ ಅರಿಶಿನವನ್ನು ಹಾಕಿ ಹೊಸ ವಿಧಗಳನ್ನು ಪರಿಚಯಿಸುತ್ತಿದೆ.
ನಿಮ್ಮ ಮಕ್ಕಳಿಗೆ ರುಚಿ ತಿಂಡಿಯೊಂದಿಗೆ ರೋಗ ನಿರೋಧಕ ಶಕ್ತಿ ವರ್ಧಿಸುವ ಔಷಧವನ್ನೂ ಪೂರೈಕೆ ಮಾಡಿ ಎಂದು ಡೈರಿ ಡೇ ಹೇಳಿಕೊಳ್ಳುತ್ತಿದೆ. ತನ್ನ ಫೇಸ್ಬುಕ್ ಪೇಜ್‌ನಲ್ಲಿ #Health is the new #cool,” ಎಂಬ ಕ್ಯಾಪ್ಷನ್‌ನೊಂದಿಗೆ ಈ ಉತ್ಪನ್ನವನ್ನು ಪ್ರಮೋಟ್ ಮಾಡ್ತಾ ಇದೆ ಡೈರಿ ಡೇ.
ಬೆಟ್ಟದ ನಲ್ಲಿಕಾಯಿ, ಖರ್ಜೂರ ಹಾಗೂ ಜೇನುತುಪ್ಪದ ಸ್ವಾದಗಳನ್ನು ಬಳಸಿಕೊಂಡು ಈ ಚ್ಯವನ್‌ಪ್ರಾಶ ಐಸ್‌ಕ್ರೀಂ ಅನ್ನು ಸಿದ್ಧಪಡಿಸಲಾಗಿದೆ. ಇದೇ ವೇಳೆ ಹೆಲ್ದೀ ಐಸ್‌ಕ್ರೀಂ ಅನ್ನು ಅರಿಶಿನ, ಮೆಣಸು ಹಾಗೂ ಜೇನುತುಪ್ಪದ ಮೊದಲಾದ ಆರೋಗ್ಯಕರ ವಸ್ತುಗಳೊಂದಿಗೆ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
https://www.facebook.com/dairydayicecream/videos/1131853390512551
https://twitter.com/SriramSahu1996/status/1275747119937155074?ref_src=twsrc%5Etfw%7Ctwcamp%5Etweetembed%7Ctwterm%5E1275747119937155074%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fchyawanprash-icecream-goes-viral-and-netizens-wont-try-it-even-out-of-curiosity%2F612052