ಹಳ್ಳಿಗಳಲ್ಲಿನ ಕೆರೆ-ಕುಂಟೆಗಳು ಯಾವ ಮೋಜು-ಮಸ್ತಿಯು ಅಮ್ಯುಸ್ಮೆಂಟ್ ಪಾರ್ಕ್ ಗಳಿಗಿಂತ ಕಡಿಮೆಯೇನಲ್ಲ.
ಅದರಲ್ಲೂ ಮಕ್ಕಳ ಪಾಲಿಗಂತೂ ಹಳ್ಳಿ ಊರುಗಳಲ್ಲಿನ ಕೆರೆ, ತೊರೆ, ಕೊಳಗಳಂತೂ ಆಟವಾಡಲು ಅಚ್ಚುಮೆಚ್ಚಿನ ಸ್ಥಳಗಳು.
ಮಕ್ಕಳೇ ಹಾಗೆ. ಚಿಕ್ಕ-ಪುಟ್ಟ ವಿಷಯಗಳಲ್ಲೇ ಖುಷಿಪಡುತ್ತವೆ. ದೊಡ್ಡ ಖುಷಿಗಳನ್ನ ದೊಡ್ಡವರಿಂದ ಕಲಿಯಬೇಕಷ್ಟೆ. ಅಲ್ಲಿಯವರೆಗೆ ಆಡಿದ್ದೇ ಆಟ. ಅದರಲ್ಲೇ ನೆಮ್ಮದಿ. ಸ್ವಚ್ಛಂದವಾದ ಬದುಕು. ಮುಗ್ಧ ಮನಸಿನ ಮಕ್ಕಳ ಖುಷಿಯ ಕ್ಷಣಗಳನ್ನ ಕಾಣುವುದೇ ಒಂದು ಉಲ್ಲಾಸ.
ಅಂತಹುದೇ ಒಂದು ವಿಡಿಯೋವನ್ನು ಮನೋಜ್ ಕುಮಾರ್ ಎಂಬಾತ ಪೋಸ್ಟ್ ಮಾಡಿದ್ದು, ಮಹೀಂದ್ರಾ ಸಂಸ್ಥೆ ಅಧ್ಯಕ್ಷ ಆನಂದ್ ಮಹೀಂದ್ರ ಕೂಡ ಮೆಚ್ಚಿ ಶೇರ್ ಮಾಡಿದ್ದಾರೆ.
ಕೆರೆಯೊಂದರ ಏರಿ ಮೇಲಿನಿಂದ ಇಳಿಜಾರಿನವರೆಗೆ ಓಡಿಬಂದು ಮಣ್ಣಿನಲ್ಲೇ ಸುಂಯ್ಯನೆ ಜಾರಿ ಬರುವ ಮಕ್ಕಳು ಸೀದಾ ಹೋಗಿ ನೀರಿಗೆ ಬೀಳುತ್ತಾರೆ. ಸ್ವಚ್ಛಂದವಾಗಿ ವಿಹರಿಸುತ್ತಾರೆ. ಆಡುತ್ತಾರೆ, ನಲಿಯುತ್ತಾರೆ, ಖುಷಿಪಡುತ್ತಾರೆ. ನೈಸರ್ಗಿಕವಾದ ಈಜುಕೊಳ, ಜಾರುವ ನೆಲ. ಇದಕ್ಕಿಂತ ಇನ್ಯಾವ ಅಮ್ಯುಸ್ಮೆಂಟ್ ಪಾರ್ಕ್ ಬೇಕು ?.