ಲೋಕಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ತಮ್ಮ ತಂದೆ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅಂತ್ಯಸಂಸ್ಕಾರದ ವೇಳೆ ಪ್ರಜ್ಞೆತಪ್ಪಿದ ಪ್ರಸಂಗ ನಡೆದಿದೆ.
ಕಳೆದ ಗುರುವಾರ ರಾಮ್ವಿಲಾಸ್ ಪಾಸ್ವಾನ್ ನಿಧನರಾಗಿದ್ದರು. ಪಾಟ್ನಾದ ಗಂಗಾ ತಟದಲ್ಲಿನ ದಿಘಾ ಘಾಟ್ನಲ್ಲಿ ಚಿತೆಗೆ ಬೆಂಕಿ ಇಡುವ ವೇಳೆ 37 ವರ್ಷದ ಚಿರಾಗ್ ಕುಸಿದು ಬಿದ್ದರು.
ತಕ್ಷಣವೇ ಅವರ ಕುಟುಂಬಸ್ಥರು ನೆಲಕ್ಕೆ ಉರುಳುವುದನ್ನು ತಪ್ಪಿಸಿ ಹಿಡಿದುಕೊಂಡರು. ಬಳಿಕ ಸಮಾಧಾನಪಡಿಸಿ ಮುಂದಿನ ಪ್ರಕ್ರಿಯೆ ನಡೆಸಲು ಸಹಕರಿಸಿದರು.