ಭಾರತದ ಗಡಿಯಲ್ಲಿ ಮೊದಲಿಗೆ ಚೀನಾ ದಾಳಿ ನಡೆಸಿ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಗಡಿ ದಾಳಿಯ ನಂತರ ಸೈಬರ್ ದಾಳಿಗೆ ಚೀನಾ ಸಂಚು ರೂಪಿಸಿದೆ.
ಈ ಕುರಿತಾಗಿ ಭಾರತಕ್ಕೆ ಸಿಂಗಾಪುರ ಕಂಪನಿಯಿಂದ ಮಾಹಿತಿ ನೀಡಲಾಗಿದೆ. ಮಹಾರಾಷ್ಟ್ರ ಸೈಬರ್ ಇಲಾಖೆ ಇದನ್ನು ಖಚಿತಪಡಿಸಿದ್ದು ಮೂರ್ನಾಲ್ಕು ದಿನಗಳಲ್ಲಿ 40,300 ಬಾರಿ ಭಾರತದ ಮೇಲೆ ಸೈಬರ್ ದಾಳಿಗೆ ಹ್ಯಾಕರ್ ಗಳು ಪ್ರಯತ್ನ ನಡೆಸಿದ್ದಾರೆ.
ಭಾರತದ ಪ್ರಮುಖ ಸಂಸ್ಥೆ, ಇಲಾಖೆ, ಖಾಸಗಿ ಕಂಪನಿಗಳ ವೆಬ್ ಸೈಟ್ ಗಳನ್ನು ಚೀನಾ ಹ್ಯಾಕರ್ಸ್ ಹ್ಯಾಕ್ ಮಾಡಬಹುದು. ಇತ್ತೀಚೆಗೆ ಆಸ್ಟ್ರೇಲಿಯಾ ಚೀನಾ ನಡೆಯನ್ನು ವಿರೋಧಿಸಿದ್ದು, ಆಸ್ಟ್ರೇಲಿಯಾ ಮೇಲೆ ಸೈಬರ್ ದಾಳಿ ಮಾಡಲಾಗಿತ್ತು. ಪ್ರಮುಖ ಇಲಾಖೆ ಕಂಪನಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಲಾಗಿತ್ತು. ಆಸ್ಟ್ರೇಲಿಯಾ ಬಳಿಕ ಭಾರತದ ಮೇಲೆ ಸೈಬರ್ ದಾಳಿಗೆ ಚೀನಾ ಸಂಚು ರೂಪಿಸಿದೆ.