ದೇಶೀ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ಕೊಡುವ ದೃಷ್ಟಿಯಿಂದ ಮಿಲಿಟರಿ ಕ್ಯಾಂಟೀನ್‌ಗಳು ಹಾಗೂ ಡಿಪಾಟ್ಮೆಂಟ್ ಸ್ಟೋರ್‌ಗಳಲ್ಲಿ ಚೀನಾ ಸೇರಿದಂತೆ ಇನ್ನಿತರ ದೇಶಗಳ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರಲು ರಕ್ಷಣಾ ಸಚಿವಾಲಯ ಚಿಂತನೆ ನಡೆಸುತ್ತಿದೆ.
ರಕ್ಷಣಾ ಸಚಿವಾಲಯದ ಕ್ಯಾಂಟೀನ್ ಸ್ಟೋರ‍್ಸ್ ಇಲಾಖೆ (CSD) ದೇಶಾದ್ಯಂತ 3500+ ಕ್ಯಾಂಟೀನ್‌ಗಳನ್ನು ಹೊಂದಿದೆ. ಸಿಯಾಚಿನ್ ನೀರ್ಗಲ್ಲಿನಿಂದ ಅಂಡಮಾನ್ ನಿಕೋಬಾರ್ ದ್ವೀಪಗಳವರೆಗೂ CSDಯ ಜಾಲ ಹಬ್ಬಿದೆ.
ಇಲ್ಲಿ ಮಾರಾಟವಾಗುವ 5000ಕ್ಕೂ ಹೆಚ್ಚು ಸರಕುಗಳ ಪೈಕಿ 400ರಷ್ಟು ಆಮದಾಗುತ್ತಿವೆ. ಟಾಯ್ಲೆಟ್ ಬ್ರಶ್‌ಗಳು, ಡೈಪರ್ ಪ್ಯಾಂಟ್‌ಗಳು, ಅಕ್ಕಿ ಕುಕ್ಕರ್‌ಗಳು, ಎಲೆಕ್ಟ್ರಿಕ್ ಕೆಟಲ್‌ಗಳು, ಸ್ಯಾಂಡ್‌ವಿಚ್ ಟೋಸ್ಟರ್‌ಗಳು, ವ್ಯಾಕ್ಯೂಮ್ ಕ್ಲೀನರ್‌ಗಳು, ಸನ್ ಗ್ಲಾಸ್, ಲೇಡೀಸ್ ಹ್ಯಾಂಡ್‌ಬ್ಯಾಗ್, ಲ್ಯಾಪ್‌ಟಾಪ್ ಹಾಗೂ ಡೆಸ್ಕ್ ಟಾಪ್ ಕಂಪ್ಯೂಟರ್‌ಗಳು ಇವುಗಳಲ್ಲಿ ಪ್ರಮುಖವಾಗಿವೆ.
ಇದೇ ವೇಳೆ ವಿದೇಶೀ ಲಿಕ್ಕರ್ ಅನ್ನು ಸಹ ಕ್ಯಾಂಟೀನ್‌ಗಳಲ್ಲಿ ಮಾರಾಟ ಮಾಡದೇ ಇರುವ ಸಾಧ್ಯತೆಗಳು ಇವೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲ ತಿಂಗಳುಗಳಿಂದ ಆಯ್ದ ಕ್ಯಾಂಟೀನ್‌ಗಳಲ್ಲಿ ವಿದೇಶೀ ಮದ್ಯದ ಮಾರಾಟ ನಿಷೇಧಿಸಲಾಗಿದೆ.