

ಇದರ ಸೆಟಲೈಟ್ ಚಿತ್ರಗಳು ಮಾಧ್ಯಮಗಳಲ್ಲಿ ಹರಿದಾಡಿದ್ದು, ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಲೇಹ್ ಗಡಿಗೆ ಅಚ್ಚರಿಯ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸೇನಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದ ಅವರು, ಬಳಿಕ ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀಯ ಯೋಧರ ಯೋಗಕ್ಷೇಮ ವಿಚಾರಿಸಿದ್ದರು.
ಅಲ್ಲದೇ ಚೀನಾ ಹೆಸರು ಪ್ರಸ್ತಾಪಿಸದೆ, ಭಾರತ ಈ ಹಿಂದಿನಂತಿಲ್ಲ. ನಮ್ಮ ಮೇಲೆ ಆಕ್ರಮಣ ಮಾಡಿದವರಿಗೆ ತಕ್ಕ ಪಾಠ ಕಲಿಸದೇ ಸುಮ್ಮನಿರುವುದಿಲ್ಲವೆಂದು ಗುಡುಗಿದ್ದರು. ಇದಾದ ಮೂರು ದಿನಗಳ ಬಳಿಕ ಲೈನ್ ಆಫ್ ಆಕ್ಚುಲ್ ಕಂಟ್ರೋಲ್ ಬಳಿ ಅಚ್ಚರಿಯ ಘಟನೆ ನಡೆದಿದೆ.
ಚೀನಾ ಸೈನಿಕರು ಅಲ್ಲಿಂದ ಸುಮಾರು ಒಂದರಿಂದ ಎರಡು ಕಿಲೋ ಮೀಟರ್ ಗಳಷ್ಟು ದೂರ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಅಲ್ಲಿ ಘರ್ಷಣೆಗೂ ಮುನ್ನ ಇದ್ದ ಸಹಜ ಪರಿಸ್ಥಿತಿಯೇ ನೆಲೆಸಿದೆ. ಘರ್ಷಣೆ ನಂತರದ ಹಾಗೂ ಚೀನಾ ಪಡೆ ಹಿಂದೆ ಸರಿದ ಕುರಿತ ಸೆಟಲೈಟ್ ಚಿತ್ರಗಳು ಈಗ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.