ನವದೆಹಲಿ: ಚೀನಾದೊಂದಿಗೆ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ನಾಯಕರ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ವಿವಿಧ ಪಕ್ಷಗಳ ನಾಯಕರೊಂದಿಗೆ ಮಾತನಾಡಿದ ಮೋದಿ, ನಮ್ಮ ಭೂಮಿಯ ಒಂದು ಇಂಚಿನ ಮೇಲೆ ಕೂಡ ಯಾರು ಕಣ್ಣಿಡಲು ಸಾಧ್ಯವಿಲ್ಲ. ಏಕಕಾಲದಲ್ಲಿ ಹಲವೆಡೆ ದಾಳಿ ನಡೆಸಬಲ್ಲ ಸಾಮರ್ಥ್ಯ ಭಾರತದ ಸೇನೆಗೆ ಇದೆ ಎಂದು ಹೇಳಿದ್ದಾರೆ.
ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕೋ ಅದೆಲ್ಲವನ್ನು ಭಾರತೀಯ ಸೇನೆ ಮಾಡುತ್ತಿದೆ. ಅದು ಭೂಮಿ ಮೇಲೆ ಇರಬಹುದು ಅಥವಾ ಸಾಗರದಲ್ಲಿಯೇ ಆಗಬಹುದು. ನಮ್ಮ ಗಡಿಯೊಳಗೆ ನುಸುಳಿ ಯಾವುದೇ ಸ್ಥಳವನ್ನು ಅವರು ಆಕ್ರಮಿಸಿಕೊಂಡಿಲ್ಲ. ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಕೆಣಕಲು ಬಂದವರಿಗೆ ಪಾಠ ಕಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಡಿಯನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಮೂಲಸೌಕರ್ಯ ಅಭಿವೃದ್ದಿ ಪಡಿಸಲಾಗುತ್ತಿದೆ. ಸೇನೆಯ ಸಶಸ್ತ್ರ ಪಡೆಗಳು, ಯುದ್ಧವಿಮಾನಗಳು, ಹೆಲಿಕಾಪ್ಟರ್ಗಳು, ಕ್ಷಿಪಣಿ ವ್ಯವಸ್ಥೆಗಳಿಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಡೀ ದೇಶ ನಮ್ಮ ಸೇನೆಯ ಜೊತೆಗಿದೆ ಎಂದು ತಿಳಿಸಿದ್ದಾರೆ.