ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಸಂಘರ್ಷದ ನಂತರ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಕಂಡುಬರುತ್ತಿದೆ. ಎರಡೂ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಗಡಿಯಲ್ಲಿ ನಿಯೋಜನೆ ಮಾಡಿದ್ದು ಆತಂಕ ಮೂಡಿಸಿದೆ.
ಭಾರತೀಯ ಸೇನೆ ಭಾರೀ ಕಟ್ಟೆಚ್ಚರ ವಹಿಸಿದ್ದು ಲಡಾಖ್ ನಿಂದ ಅರುಣಾಚಲ ಪ್ರದೇಶದವರೆಗಿನ ಸುಮಾರು 3500 ಕಿಲೋಮೀಟರ್ ಉದ್ದದ ಗಡಿಯಲ್ಲಿ ಅಲರ್ಟ್ ಘೋಷಿಸಲಾಗಿದೆ. ಭಾರತ-ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿರುವಾಗಲೇ ರಷ್ಯಾದಿಂದ ಯುದ್ಧವಿಮಾನಗಳ ಖರೀದಿಗೆ ಭಾರತ ಮುಂದಾಗಿದೆ. 12 ಸುಖೋಯ್ ಮತ್ತು 21 ಮಿಗ್-29 ಯುದ್ಧ ವಿಮಾನಗಳನ್ನು ಖರೀದಿಸಲು ಭಾರತೀಯ ವಾಯುಪಡೆ ರಕ್ಷಣಾ ಸಚಿವಾಲಯ ಅಂತಿಮ ನಿರ್ಣಯಕ್ಕೆ ಬಂದಿದೆ.
ಲಡಾಖ್ ಸಮೀಪ 15000 ಯೋಧರನ್ನು ನಿಯೋಜಿಸಿದ ಭಾರತದಿಂದ ಚೀನಾದವರು ಕಾಲಿಟ್ಟರೆ ದಾಳಿಗೆ ಸೂಚನೆ ನೀಡಲಾಗಿದೆ.