ಮದ್ಯದ ಅಂಗಡಿಯ ಮುಂದೆ ಹಾಕಲಾಗಿದ್ದ ಬ್ಯಾನರ್ ಒಂದು ನೆಟ್ಟಿಗರನ್ನು ಗೊಂದಲಕ್ಕೆ ತಳ್ಳಿದೆ. ಜೊತೆಗೆ ಒಂದಷ್ಟು ಹಾಸ್ಯಮಯ ಚರ್ಚೆಗೆ ಕಾರಣವಾಗಿದೆ.
ಜಾಲತಾಣದಲ್ಲಿ ಫೋಟೋ ಒಂದು ವೈರಲ್ ಆಗಿದ್ದು, ಮದ್ಯದಂಗಡಿಯ ಮುಂದೆ ಹಾಕಲಾಗಿದ್ದ ಬ್ಯಾನರ್ ನಲ್ಲಿ ಚಿಲ್ಡ್ ಬಿಯರ್ ಗೆ 140, ಥಂಡಿ ಬಿಯರ್ ಗೆ 150 ರೂ. ಎಂದು ದೊಡ್ಡದಾಗಿ ನಮೂದಿಸಿರುವು ಕಾಣಿಸುತ್ತದೆ.
ಥಂಡಿ ಬಿಯರ್ ಮತ್ತು ಚಿಲ್ಡ್ ಬಿಯರ್ ಒಂದೇ ಅಲ್ಲವೇ? ವ್ಯತ್ಯಾಸ ಏನಿದೆ ಎಂಬ ತರ್ಕ ನೆಟ್ಟಿಗರದ್ದಾಗಿದೆ.
ಇಂಗ್ಲಿಷ್ನಲ್ಲಿ ಮಾತನಾಡುವವರಿಗೆ ಹತ್ತು ರಿಯಾಯಿತಿ ಪಡೆಯಲು ಅವಕಾಶವಿದೆ ಎಂದು ಹಲವರು ಗೇಲಿ ಮಾಡಿದ್ದರೆ, ದೇಸಿ ಮದ್ಯವು ಇಂಗ್ಲಿಷ್ ಬಿಯರ್ ಗಿಂತ ದುಬಾರಿ ಎಂದು ಮತ್ತೆ ಕೆಲವರು ವ್ಯಾಖ್ಯಾನಿಸಿದ್ದಾರೆ.
https://twitter.com/Bhoolwerine/status/1280178716346204160?ref_src=twsrc%5Etfw%7Ctwcamp%5Etweetembed%7Ctwterm%5E1280178716346204160%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fchilled-beer-rs-140-thandi-beer-rs-150-liquor-shop-menu-leaves-netizens-in-splits%2F618320