ಕೊರೊನಾದಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಕಾಳಜಿ ವಹಿಸ್ತಿದ್ದಾರೆ. ಬಿಸಿ ನೀರು, ಕಷಾಯ, ಆಯುರ್ವೇದ ಔಷಧಿ ಸೇವನೆ ಮಾಡ್ತಿದ್ದಾರೆ. ಮಕ್ಕಳಿಗೆ ಕೊರೊನಾ ಬರದಂತೆ ನೋಡಿಕೊಳ್ಳಲು ಪಾಲಕರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಈ ಎಚ್ಚರಿಕೆ ಮಧ್ಯೆ ಒಡಿಶಾದಲ್ಲಿ ನಡೆದ ಘಟನೆ ಗಮನ ಸೆಳೆದಿದೆ.
ಒಡಿಶಾದ ಮಲ್ಕಂಗಿರಿನಲ್ಲಿ ಕೊರೊನಾ ವೈರಸ್ ನಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳಿಗೆ ಆಲ್ಕೋಹಾಲ್ ಕುಡಿಸಲಾಗಿದೆ. 10-12 ವರ್ಷ ವಯಸ್ಸಿನ ಮಕ್ಕಳಿಗೆ ದೇಶಿ ಮದ್ಯ ಕುಡಿಸಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,
ಸುಮಾರು 50 ಮಕ್ಕಳಿಗೆ ಮದ್ಯ ನೀಡಲಾಗಿದೆ. ದೇಶಿ ಮದ್ಯ ಸೇವಿಸುವುದರಿಂದ ಮಕ್ಕಳಲ್ಲಿ ಕೊರೊನಾ ಸೋಂಕು ಹರಡುವುದಿಲ್ಲವೆಂದು ಸ್ಥಳೀಯರು ನಂಬಿದ್ದಾರೆ. ಆದ್ರೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ದೇಹಾರೊಗ್ಯ ಹದಗೆಡಿಸುವ ಮದ್ಯ ಕುಡಿಸುವ ಕೆಲಸಕ್ಕೆ ಇಳಿದಿರುವುದು ಆತಂಕ ತಂದಿದೆ. ಜಿಲ್ಲಾಡಳಿತ ಈ ಬಗ್ಗೆ ವಿಚಾರಣೆ ನಡೆಸುತ್ತಿದೆ.