ಬಿಹಾರದ ಸಸಾರಂನಿಂದ ನೋವಿನ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಸುರೇಂದ್ರ ಮಿಶ್ರಾ ಮೇ 23 ರಂದು ಹಠಾತ್ತನೆ ನಿಧನರಾದರು. ಸ್ಥಳೀಯರ ಪ್ರಕಾರ, 3 ವರ್ಷಗಳ ಹಿಂದೆ, ಸುರೇಂದ್ರ ಪತ್ನಿ ತನ್ನ ನಾಲ್ಕು ಮಕ್ಕಳನ್ನು ಬಿಟ್ಟು ಎಲ್ಲೋ ಓಡಿ ಹೋಗಿದ್ದಾಳೆ. ಈಗ ತಂದೆಯೂ ಇಲ್ಲದ ಮಕ್ಕಳು ಅನಾಥರಾಗಿದ್ದಾರೆ.
ಸುರೇಂದ್ರ ಮಿಶ್ರಾ ಕೂಲಿ ಕಾರ್ಮಿಕ. ಹೆಂಡತಿ ನಾಪತ್ತೆಯಾದ್ಮೇಲೆ ತನ್ನ ಮಕ್ಕಳನ್ನು ನೋಡಿಕೊಳ್ತಿದ್ದ. ಲಾಕ್ ಡೌನ್ ವೇಳೆ ಕೆಲಸವಿಲ್ಲದೆ ಸಾವನ್ನಪ್ಪಿದ್ದಾರೆ. ತಾಯಿಯಿಲ್ಲದ ಮಕ್ಕಳು ಅನಾಥರಾಗಿದ್ದು, ಒಪ್ಪತ್ತಿನ ಊಟಕ್ಕೆ ಪರದಾಡುವಂತಾಗಿದೆ.
ಕೊಳಗೆರೆಯಲ್ಲಿ ಮಣ್ಣಿನ ಮನೆ ಬಿಟ್ಟು ಇವರಿಗೆ ಮತ್ತೇನು ಇಲ್ಲ. ಸಂಬಂಧಿಕರಿಗೂ ಆರ್ಥಿಕ ಸಮಸ್ಯೆಯಿದೆ. ಮಕ್ಕಳು ಸಂಪೂರ್ಣ ಅನಾಥರಾಗಿದ್ದಾರೆ. ಒಪ್ಪತ್ತಿನ ಊಟಕ್ಕೆ ಪರದಾಡುವಂತಾಗಿದೆ.