ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಗ್ರಾಮವೊಂದರಲ್ಲಿ ಇರುವ ಸರ್ಕಾರಿ ಶಾಲೆಯ ಮಕ್ಕಳು ಜಪಾನೀಸ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯುತ್ತಿದ್ದಾರೆ.
ಔರಂಗಾಬಾದ್ ನಗರದಿಂದ 25 ಕಿಮೀ ದೂರದಲ್ಲಿರುವ ಗಡಿವಟ್ ಗ್ರಾಮದಲ್ಲಿರುವ ಈ ಶಾಲೆಯ ಮಕ್ಕಳಿಗೆ ಜಪಾನೀಸ್ ಭಾಷೆ ಮಾತ್ರವಲ್ಲದೇ ರೊಬಾಟಿಕ್ಸ್ ಮೇಲೂ ಸಹ ಬಹಳ ಆಸಕ್ತಿ ಇದೆ. ಡಿಜಿಟಲ್ ಸಂಪರ್ಕದ ಕಾರಣ ಮಕ್ಕಳಿಗೆ ಹೊಸ ಹೊಸ ವಿಷಯಗಳನ್ನು ಕಲಿಯುವುದು ಬಹಳ ಸಲೀಸಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಈ ಶಾಲೆಯಲ್ಲಿ ವಿದೇಶೀ ಭಾಷೆಗಳನ್ನು ಕಲಿಸಲಾಗುತ್ತಿದೆ. ಇದರ ಭಾಗವಾಗಿ, 4-8ನೇ ತರಗತಿ ಮಕ್ಕಳಿಗೆ ತಮ್ಮ ಇಚ್ಛೆಯ ವಿದೇಶೀ ಭಾಷೆ ಆಯ್ದುಕೊಂಡು, ಕಲಿಯಲು ಅನುವು ಮಾಡಿಕೊಡಲಾಗಿದೆ.
ಶಾಲೆಯಲ್ಲಿ ಸೂಕ್ತವಾದ ಸಂಪನ್ಮೂಲ ಹಾಗೂ ವೃತ್ತಿಪರ ಮಾರ್ಗದರ್ಶನ ಇಲ್ಲದೇ ಇದ್ದರೂ ಸಹ ಅಂತರ್ಜಾಲದ ಮೂಲಕ ಭಾಷಾಂತರದ ಅಪ್ಲಿಕೇಶನ್‌ಗಳು ಹಾಗೂ ವಿಡಿಯೋಗಳ ಮೂಲಕ ಮಾಹಿತಿಯನ್ನು ಕಲೆ ಹಾಕಿಕೊಂಡು ಹೊಸ ಭಾಷೆಗಳನ್ನು ಕಲಿಯುತ್ತಿದ್ದಾರೆ ಈ ಮಕ್ಕಳು.