ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕೆ ಕಾರ್ಯಕ್ರಮ ಆರಂಭಗೊಳ್ಳಲು ಇನ್ನೊಂದು ದಿನ ಬಾಕಿ ಇರುವಂತೆ ಮಹತ್ವದ ನಡೆಯೊಂದರಲ್ಲಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಿಡ್ ಲಸಿಕೆ ಕೊಡದಿರಲು ಆದೇಶಿಸಿದೆ.
ಇದಕ್ಕೂ ಮುನ್ನ, ಕೋವಿಡ್-19 ನಿರೋಧಕ ಮದ್ದುಗಳ ತುರ್ತು ಬಳಕೆಗೆ ಅನುಮತಿ ಕೊಟ್ಟಿದ್ದ ಭಾರತೀಯ ಮದ್ದು ಮಹಾನಿಯಂತ್ರಕರು (ಡಿಸಿಜಿಐ) 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಕೊಡಲು ಅನುಮತಿ ಕೊಟ್ಟಿದ್ದರು.
ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯ ಕಾರ್ಯಾಲಯದ ಪತ್ರದ ಅನ್ವಯ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಹಾಗೂ ಸೀರಮ್‌ನ ಕೋವಿಶೀಲ್ಡ್ ಲಸಿಕೆಗಳನ್ನು 18 ವರ್ಷದ ಒಳಪಟ್ಟ ಮಕ್ಕಳಿಗೆ ನೀಡದಿರಲು ಕೇಂದ್ರ ಸರ್ಕಾರ ಸೂಚಿಸಿದೆ.
ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಪಾರದರ್ಶಕ ದತ್ತಾಂಶ ಸಿಗದೇ ಇರುವ ಕಾರಣ ಕೋವ್ಯಾಕ್ಸಿನ್ ಅನ್ನು ತುರ್ತು ಬಳಕೆಗೆ ಉಪಯೋಗಿಸುವ ವಿಚಾರವಾಗಿ ಸಾಕಷ್ಟು ವಿವಾದಗಳು ಎದ್ದಿವೆ.