ತಮ್ಮ ಇಂಗ್ಲಿಷ್ ನಿಘಂಟಿಗೆ ಹೆಸರುವಾಸಿಯಾಗಿರುವ ಸಂಸದ ಶಶಿ ತರೂರ್ ಭಾಷಣ ಮಾಡುವಾಗ ಬಳಸುವ ಅನೇಕ ಪದಗಳನ್ನು ಅರ್ಥ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು.
ಬರಹಗಾರ ಚೇತನ್ ಭಗತ್ ಬಗ್ಗೆ ಮೆಚ್ಚಿ ಮಾತನಾಡಿರುವ ತರೂರ್, ಭಗತ್ರ ‘3 Mistakes of my life’ ಬಗ್ಗೆ ತಮ್ಮ ಮಾತುಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ತರೂರರ ಮೆಚ್ಚುಗೆ ಮಾತುಗಳಿಗೆ ಬಲೇ ಖುಷಿಯಾದ ಭಗತ್, ಸಣ್ಣದೊಂದು ವಿನಂತಿಯನ್ನು ತಿರುವನಂತಪುರಂ ಸಂಸದರ ಮುಂದೆ ಇಟ್ಟಿದ್ದಾರೆ.
“ಒಂದು ಸಣ್ಣ ಕೋರಿಕೆ ಸರ್, ಮುಂದಿನ ಬಾರಿ ನೀವು ನನ್ನನ್ನು ಹೊಗಳುವ ವೇಳೆ ದೊಡ್ಡ ಪದಗಳನ್ನು ಬಳಸಬಹುದು, ಅದೇ ನೀವು ಮಾತ್ರ ಬಳಸುವಂಥವು?” ಎಂದಿದ್ದಾರೆ. ಇದನ್ನು ಕೇಳುತ್ತಲೇ ಫುಲ್ ಮೂಡ್ಗೆ ಬಂದ ತರೂರ್, ತಮ್ಮ ಎಂದಿನ ಶೈಲಿಯಲ್ಲಿ, ತಲೆಯಲ್ಲಿರುವ ಇಂಗ್ಲಿಷ್ ನಿಘಂಟನ್ನು ಶೋಧಿಸಿ ಸರಿಯಾದ ಪದಗಳನ್ನೇ ಪೋಣಿಸಿ ಭಗತ್ರನ್ನು ಮೆಚ್ಚಿ ಬರೆದಿದ್ದಾರೆ. ಅದನ್ನೊಮ್ಮೆ ನೀವೂ ಓದಿ ನೋಡಿ!