ತಮ್ಮ ಕರ್ತವ್ಯದ ಕೂಗನ್ನು ಮೀರಿ, ಕೆಲಸ ಮಾಡುತ್ತಿದ್ದ ವೇಳೆ ಸಿಕ್ಕ ಪ್ಯಾಕೇಜ್ ಒಂದನ್ನು ಪೊಲೀಸರಿಗೆ ಒಪ್ಪಿಸಿದ ಚೆನ್ನೈನ ಮೂವರು ಮಹಿಳಾ ಪೌರ ಕಾರ್ಮಿಕರು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಸೆಲ್ವಿ, ತಿಲಕ ಹಾಗೂ ನೀಲಾ ಎಂಬ ಹೆಸರಿನ ಈ ಮೂವರು, ತಮ್ಮ ದೈನಂದಿನ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಇಲ್ಲಿನ ತೆಯ್ನಾಮ್ಪೇಟ್ ಬಳಿ ಅನಾಮಧೇಯ ಕಾರ್ಟನ್ ಒಂದನ್ನು ನೋಡಿದ್ದಾರೆ. ಕೂಡಲೇ ಆ ಪ್ಯಾಕೇಟ್ ಪೊಲೀಸರಿಗೆ ಕೊಟ್ಟಿದ್ದಾರೆ ಈ ಮೂವರು.
ಭಾರೀ ಮಳೆಯ ನಡವೆಯೂ ಸಹ ಆ ಪ್ಯಾಕೇಜನ್ನು ಪೊಲೀಸರಿಗೆ ಒಪ್ಪಿಸಿದ ಮಹಿಳೆಯರ ಈ ಸ್ಪೂರ್ತಿಗೆ ಪೊಲೀಸ್ ವರಿಷ್ಠಾಧಿಕಾರಿ ಹರಿ ಕಿರಣ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಪ್ರಾಮಾಣಿಕತೆಗೊಂದು ಹ್ಯಾಟ್ಸಾಫ್ ಹೇಳಿದ್ದಾರೆ.
https://www.facebook.com/101758394976608/photos/a.101870764965371/101884188297362/?type=3